– ಜೆಡಿಎಸ್ ಪಕ್ಷದಿಂದ ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ಕುರಿತು ಸಭೆ
– ಚನ್ನಪಟ್ಟಣ ಜೆಡಿಎಸ್‌ನ ಭದ್ರಕೋಟೆ ಎಂದ ನಿಖಿಲ್
ಬೆಂಗಳೂರು: ಜಿಪಂ, ತಾಪಂ ಚುನಾವಣೆ ಸಿದ್ಧತೆ ಕುರಿತು ಬೆಂಗಳೂರಿನ ಜೆಪಿ ಭವನದಲ್ಲಿಂದು ಜೆಡಿಎಸ್ ಪಕ್ಷದಿಂದ (JDS Party) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ನೂರಾರು ಜೆಡಿಎಸ್ ಮುಖಂಡರು (JDS Leader) ಪಾಲ್ಗೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚಿಸಿದರು.
ಸಭೆಯ ಬಳಿಕ ಮಾಧ್ಯಮಗಳ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ನಾಯಕರಾದ ಕುಮಾರಸ್ವಾಮಿ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭ ಮೊದಲ ಸಭೆ ಮುಗಿದಿದೆ. ಸಂಘಟನೆ ಇನ್ನು ಚುರುಕು ಆಗಬೇಕು. ಹಲವಾರು ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಮಾಡಬೇಕು. ಅದರ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಜಿಲ್ಲಾವಾರು, ತಾಲ್ಲೂಕುವಾರು ಉಸ್ತುವಾರಿಗಳ ನೇಮಕ ಮಾಡಬೇಕಿದೆ ಹಾಗಾಗಿ ಈ ಸಭೆ ಕರೆದಿದ್ದೇವೆ ಎಂದರು. ಇದನ್ನೂ ಓದಿ: ಮಾಜಿ ಸಚಿವ ಎನ್ ಮಹೇಶ್ ಮನೆಯಲ್ಲಿ ಕಳ್ಳತನ – 50 ಸಾವಿರ ಹಣ ದೋಚಿದ ಕಳ್ಳರು
ಶೀಘ್ರದಲ್ಲೇ ಚನ್ನಪಟ್ಟಣ ಅಭ್ಯರ್ಥಿ ಘೋಷಣೆ:
ಚನ್ನಪಟ್ಟಣ ಉಪಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ (HD Kumaraswamy) ಅವರ ಸ್ವಕ್ಷೇತ್ರ ಕಳೆದ 2 ಬಾರಿ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಹಾಗಾಗಿ ಪಕ್ಷದ ಧ್ವನಿಯಾಗಿ ಪಕ್ಷ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆ (Channapatna By Election 2024) ಶೀಘ್ರದಲ್ಲೇ ಘೋಷಣೆ ಆಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು. ಕಾರ್ಯಕರ್ತರ ಬಯಕೆ ಆ ನಿಟ್ಟಿನಲ್ಲಿ ಕೆಲಸ ಮಾಡ್ತಾ ಇದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅಂತಿಮವಾಗಿ ದೆಹಲಿಯ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಈಗಾಗಲೇ ವರದಿ ಸಹ ಹೈಕಮಾಂಡ್ ಕೈಸೇರಿದೆ. ಕೆಲವೇ ದಿನಗಳಲ್ಲಿ ಎನ್‌ಡಿಎ ಅಭ್ಯರ್ಥಿ ಘೋಷಣೆ ಮಾಡ್ತಾರೆ ಎಂದು ವಿವರಿಸಿದರು.
ಚನ್ನಪಟ್ಟಣ ಕಾಂಗ್ರೆಸ್ ಭದ್ರಕೋಟೆ:
ಇನ್ನೂ ಜೆಡಿಎಸ್, ಬಿಜೆಪಿಗೆ ಸ್ಥಾನ ಬಿಟ್ಟು ಕೊಡುತ್ತಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ನಿಖಿಲ್, ಇಲ್ಲಿ ಪ್ರಶ್ನೆ ಯಾವುದೇ ತೀರ್ಮಾನ, ಚರ್ಚೆ ಬೀದಿಯಲ್ಲಿ ಮಾಡೋದು ಸೂಕ್ತ ಅಲ್ಲ. ಏನೇ ಇದ್ದರೂ ಅಧಿಕೃತ ತೀರ್ಮಾನ ಆಗಬೇಕು. ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ದೆಹಲಿ ನಾಯಕರು, ನಮ್ಮ ನಾಯಕರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು. ಟಿಕೆಟ್ ಗೊಂದಲ ಕಾಂಗ್ರೆಸ್‌ಗೆ ಲಾಭ ಆಗುವ ವಿಚಾರ ಕುರಿತು ಮಾತನಾಡಿ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ, ವರದೇಗೌಡರಂತ ಸಾಮಾನ್ಯ ವ್ಯಕ್ತಿಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್‌ನ 60 ಸಾವಿರ ಮತಗಳಿವೆ. ಕಾಂಗ್ರೆಸ್‌ಗೆ ಚನ್ನಪಟ್ಟಣದಲ್ಲಿ ನೆಲೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮತಗಳು ಬಂದಿರಬಹುದು. ನಾವು ಡೇಟಾ ಇತಿಹಾಸ ನೋಡಿದಾಗ ತಿಳಿಯುತ್ತೆ. ಸಿ.ಪಿ ಯೋಗಿಶ್ವರ್ ಅವರು ಸಹ ವೈಯಕ್ತಿಕ ವರ್ಚಸ್ಸು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಸಾರಥ್ಯದಲ್ಲಿ ಮೂಡಿಬಂದ ‘ಕರ್ಕಿ’: ಜೆಪಿ ನಾಯಕ
2018ರಲ್ಲಿ ಕುಮಾರಣ್ಣನನ್ನ ಸಿಎಂ ಮಾಡ್ದಾಗ ಏನ್ ಮಾಡ್ತಿದ್ರು?
ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತಕ್ಕೆ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ನಿಖಿಲ್, ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರ ನಾಯಕತ್ವದ ಶಕ್ತಿ ಹೆಚ್ಚಾಗಿದೆ. ಹಳೇ ಮೈಸೂರು ಪ್ರಾಂತ್ಯ ಅಲ್ಲದೇ, ಉತ್ತರ ಕರ್ನಾಟಕದಲ್ಲೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ನಿನ್ನೆ-ಮೊನ್ನೆ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ರು. ಅಲ್ಲಿ ಮುಖ್ಯವಾದ ಚರ್ಚೆ ಕುಮಾರಸ್ವಾಮಿ ಅವರನ್ನ ಯಾವ ರೀತಿ ಕಟ್ಟಿ ಹಾಕಬೇಕು ಅಂತ ಚರ್ಚೆ ಆಗಿದೆ. ಗಣಿಗಾರಿಕೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ನಾನು ಕಾಂಗ್ರೆಸ್ ನಾಯಕರಿಗೆ ಒಂದು ಪ್ರಶ್ನೆ ಕೇಳ್ತೀನಿ.. 2018 ರಲ್ಲಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡೋಕೆ ಬಂದ್ರು. ಆಗ ಇವರಿಗೆ ಮಾಹಿತಿ ಇರಲಿಲ್ವ? ಈಗ ಯಾಕೆ ಇದನ್ನ ಪ್ರಶ್ನೆ ಮಾಡ್ತಾ ಇದ್ದಾರೆ? ಗೌರ್ನರ್ ವಿರುದ್ಧ ಪ್ರತಿಟನೆ ಮಾಡಿದ್ರು, ಮುಡಾ ವಿಚಾರ ದೇಶಾದ್ಯಂತ ಚರ್ಚೆ ಆಗ್ತಾ ಇದೆ. ಮುಡಾದು ಪ್ರತಿದಿನ ಒಂದಲ್ಲ ಒಂದು ದಾಖಲೆ ಹೊರಗಡೆ ಬರ್ತಾನೆ ಇದೆ ಎಂದು ಕೈ ನಾಯಕರಿಗೆ ತಿಳಿದರು.
ಕುಮಾರಸ್ವಾಮಿ ಗಣಿಗಾರಿಕೆಗೆ ಸಹಿ ಹಾಕಿಲ್ಲ. ಇವರ‍್ಯಾರು ಸಹ ಕುಮಾರಸ್ವಾಮಿ ಅವರನ್ನ ಕೇಂದ್ರ ಸಚಿವ ಸ್ಥಾನದಿಂದ ಇಳಿಸೋಕೆ ಆಗಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅಷ್ಟೇ. ಮುಡಾ ಹಗರಣ ಮುಚ್ಚಿಹಾಕಲು ಪ್ಲಾನ್ ಅಷ್ಟೇ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸರ್ಕಾರ ಕೆಡವಲು ಶಾಸಕರಿಗೆ 100 ಕೋಟಿ ರೂ. ಆಫರ್: ಗಣಿಗ ರವಿಕುಮಾರ್ ಆರೋಪ