ಮುಂಬೈ: ಬಿರುಗಾಳಿ ಮತ್ತು ಕೆಟ್ಟ ಹವಾಮಾನ ಪರಿಸ್ಥಿತಿಯಿಂದಾಗಿ ಪುಣೆಯ ಪೌಡ್ ಗ್ರಾಮದ ಬಳಿ ಖಾಸಗಿ ಹೆಲಿಕಾಪ್ಟರ್‌ವೊಂದು ಪತನಗೊಂಡಿದ್ದು (Pune Helicopter crashes), ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
AW 139 ಖಾಸಗಿ ಹೆಲಿಕಾಪ್ಟರ್ (Private Helicopter) ಮುಂಬೈನ ಜುಗುನಿಂದ ಹೈದರಾಬಾದ್‌ಗೆ ಹೋರಟಿತ್ತು. ಈ ವೇಳೆ ಪೌಡ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ ಉತ್ತೇಜಕ್ಕೆ 125 ಕೋಟಿ ಮೊತ್ತದ ನಿಧಿ ಸ್ಥಾಪನೆಗೆ ಐಸಿಸಿ ನಿರ್ಧಾರ – ಭಾರತ, ಆಸೀಸ್‌ಗಿಲ್ಲ ಲಾಭ ಏಕೆ?
ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಸದ್ಯ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್ಪಿ ಪಂಕಜ್ ದೇಶಮುಖ್ ಪುಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್ ಶಾಕ್- ಅದ್ಧೂರಿ ಕನ್ವೆನ್ಷನ್ ಸೆಂಟರ್ ಧ್ವಂಸ