ನವದೆಹಲಿ: ಸ್ಪರ್ಧಾತ್ಮಕ ವಲಯದಲ್ಲಿ ನಾವು ಸ್ಪರ್ಧಿಸಬೇಕಾಗುತ್ತದೆ. ಇಲ್ಲದಿದ್ದರೆ ಕಂಪನಿಗಳು ಬೇರೆ ರಾಜ್ಯಕ್ಕೆ ಹೋಗುತ್ತವೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರು ಜಿಂದಾಲ್ ಕಂಪನಿಗೆ (Jindal Company) ಭೂಮಿ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಜಿಂದಾಲ್‌ಗೆ 3,667 ಎಕರೆ ಭೂಮಿ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದಕ್ಕೆ ಕೇಳಲಾದ ಪ್ರಶ್ನೆಗೆ, ಓಲಾ, ಕಿಯಾ ಬೇರೆ ಕಡೆಗೆ ಹೋಗಿವೆ. ಹೀಗಾಗಿ ಕಂಪನಿಗಳನ್ನು ಆಕರ್ಷಿಸಲು ಭೂಮಿ ನೀಡಲಾಗಿದೆ. ಬಿಜೆಪಿ ಅವಧಿಯಲ್ಲಿ ನಮ್ಮನ್ನು ವಿಶ್ವಾಸಕ್ಕೆ ಪಡೆಯಲಿಲ್ಲ. ಹೀಗಾಗಿ ನಾವು ವಿರೋಧ ಮಾಡಿದ್ದೆವು. ಈಗ ರಾಜ್ಯದ ಹಿತದೃಷ್ಟಿಯಿಂದ ನಾವು ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟರ್ ಪತನ – ನಾಲ್ವರ ಪೈಕಿ, ಮೂವರ ಸ್ಥಿತಿ ಗಂಭೀರ
ಶುಕ್ರವಾರ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕರೆಸಿ ಮಾತನಾಡಿದ್ದಾರೆ. ಆ.29 ರಂದು ಬರುವ ತೀರ್ಪಿನ ಬಳಿಕದ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಕಾನೂನು ಪ್ರಕಾರವಾಗಿಯೇ ಹೋರಾಟ ಮಾಡುತ್ತಿದ್ದೇವೆ ಎಂದರು.
ಗ್ಯಾರಂಟಿಗಳ ಸಕ್ಸಸ್ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಹೆದರಿದೆ. ಜೊತೆಗೆ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಪ್ರಯತ್ನ ಆಗುತ್ತಿದೆ. ಕೇಂದ್ರದ ಸಹಕಾರ ಪಡೆದು ಸರಕಾರ ಕೆಡುವ ಪ್ರಯತ್ನ ನಡೆಯುತ್ತಿದ್ದು ರಾಜ್ಯಪಾಲರ ಮೂಲಕ ಒತ್ತಡ ಹಾಕಲಾಗುತ್ತಿದೆ.