ಶ್ರೀಲಂಕಾ ನೌಕಾಪಡೆಯಿಂದ 11 ಭಾರತೀಯ ಮೀನುಗಾರರ ಬಂಧನ – ಬಿಡುಗಡೆಗೆ ಸ್ಟಾಲಿನ್ ಮನವಿ

Public TV
1 Min Read
22 Tamil Nadu fishermen arrested by Sri Lanka Navy near Neduntheevu

ಚೆನ್ನೈ: ಗಡಿ ಉಲ್ಲಂಘನೆ ಆರೋಪದ ಮೇಲೆ ತಮಿಳುನಾಡಿನ (Tamil Nadu) 11 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ (Sri Lankan Navy) ಬಂಧಿಸಿದೆ.

ಮೀನುಗಾರರ ಬಂಧನದ ವಿಚಾರವಾಗಿ ಸಿಎಂ ಎಂ.ಕೆ ಸ್ಟಾಲಿನ್ (MK Stalin) ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ತೀವ್ರ ಕಳವಳದಿಂದ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ಕೂಡಲೇ ಮೀನುಗಾರರ ಬಿಡುಗಡೆಗೆ ಕ್ರಮಕೈಗೊಳ್ಳಿ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಶ್ರೀಲಂಕಾದಿಂದ ಪದೇ ಪದೇ ಭಾರತೀಯ ಮೀನುಗಾರರ ಬಂಧನವಾಗುತ್ತಿದೆ. 2024 ರಲ್ಲಿ 324 ಮೀನುಗಾರರನ್ನು ಬಂಧಿಸಿದೆ. ಅಲ್ಲದೇ 44 ದೋಣಿಗಳನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ ಎಂದು ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಅವಕಾಶ ಇದೆ: ಸಿಎಂ

ಇತ್ತೀಚೆಗೆ ಶ್ರೀಲಂಕಾದ ಅಪರಿಚಿತ ವ್ಯಕ್ತಿಗಳು ಸಮುದ್ರದಲ್ಲಿ ಮೀನುಗಾರರ ಮೇಲೆ ದಾಳಿ ನಡೆಸಿದ್ದರು. ಇಂತಹ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದು ಸ್ಟಾಲಿನ್ ಮನವಿ ಮಾಡಿದ್ದಾರೆ. ನಮ್ಮ ಎಲ್ಲಾ ಮೀನುಗಾರರು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಎರಡೂ ದೇಶಗಳ ಸಂಬಂಧ ಉತ್ತಮಗೊಳಿಸುವಲ್ಲಿ ಕೇಂದ್ರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜೂನ್ ತಿಂಗಳಲ್ಲಿ ನೆಡುಂತೀವು ಬಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 22 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿತ್ತು. ಅಲ್ಲದೇ 3 ಮೀನುಗಾರರ ದೋಣಿಗಳನ್ನು ಶ್ರೀಲಂಕಾದ ನೌಕಾಪಡೆ ವಶಪಡಿಸಿಕೊಂಡಿತ್ತು. ಇದನ್ನೂ ಓದಿ: ಮೋದಿ, ಯೋಗಿಯನ್ನು ಹೊಗಳಿದ್ದಕ್ಕೆ ಹೆಂಡತಿ ಮುಖಕ್ಕೆ ಬಿಸಿ ಸಾಂಬಾರ್‌ ಎರಚಿ ತಲಾಖ್‌ ನೀಡಿದ ಪತಿ

Share This Article