ದಿಸ್ಪುರ್: ಸ್ಥಳ ಮಹಜರು ವೇಳೆ ಅತ್ಯಾಚಾರದ (Rape) ಆರೋಪಿಯೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕೊಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಾಗೋನ್ ಜಿಲ್ಲೆಯ ಢಿಂಗ್‌ನಲ್ಲಿ ನಡೆದಿದೆ.
ತಾಫುಜಲ್ ಇಸ್ಲಾಂ ಸಾವನ್ನಪ್ಪಿದ ಆರೋಪಿ. ಆ.22ರ ಸಾಯಂಕಾಲ ತಾಫುಜಲ್ ಸೇರಿ ಮೂವರು 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಫುಜಲ್‌ನನ್ನು ಆ.23 ರಂದು ಪೊಲೀಸರು ಬಂಧಿಸಿದ್ದರು ಹಾಗೂ ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ. ಇದನ್ನೂ ಓದಿ: ಅಂಜನಾದ್ರಿ ಭಾಗದಲ್ಲಿ ಕೋಮು ಸೌಹಾರ್ದತೆ ಕದಡುತ್ತೆ – ಬಿಲ್ಲು, ಬಾಣ ಗುರುತಿರುವ ವಿದ್ಯುತ್ ಕಂಬಗಳಿಗೆ SDPI ವಿರೋಧ
ಸ್ಥಳ ಮಹಜರು (Crime Scene) ನಡೆಸುವುದಕ್ಕಾಗಿ ಇಂದು (ಆ.24) ಬೆಳಗಿನ ಜಾವ 4 ಗಂಟೆಗೆ ಆರೋಪಿಯನ್ನು ಅತ್ಯಾಚಾರ ನಡೆದ ಸ್ಥಳಕ್ಕೆ ಕರೆತರಲಾಗಿತ್ತು. ಆವಾಗ ಆರೋಪಿಯು ಪೊಲೀಸ್ ಸಿಬ್ಬಂದಿಯ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿ ಹತ್ತಿರದಲ್ಲಿದ್ದ ಕೊಳಕ್ಕೆ ಬಿದ್ದಿದ್ದಾನೆ.
The horrific incident at Dhing, involving a minor, is a crime against humanity and has struck our collective conscience.
We will NOT SPARE anyone & BRING the perpetrators to JUSTICE. I’ve directed @DGPAssamPolice to visit the site and ensure swift action against such monsters.
— Himanta Biswa Sarma (@himantabiswa) August 23, 2024
ಸ್ಥಳ ಮಹಜರು ನಡೆಸುವುದಕ್ಕೆ ಆರೋಪಿಯನ್ನು ಅತ್ಯಾಚಾರ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆರೋಪಿಯು ಪೊಲೀಸ್ ಸಿಬ್ಬಂದಿಯ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಹೋದಾಗ ಕೊಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ನಮ್ಮ ಪೊಲೀಸ್ ಸಿಬ್ಬಂದಿಗೂ ಕೂಡ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Karkala | ಕಿಡ್ನಾಪ್‌ಗೈದು ಮದ್ಯದಲ್ಲಿ ಅಮಲು ಪದಾರ್ಥ ಸೇರಿಸಿ ರೇಪ್ – ಉಡುಪಿ ಎಸ್‌ಪಿ ಹೇಳಿದ್ದೇನು?
ಎಸ್‌ಡಿಆರ್‌ಎಫ್ ತಂಡ ಮೂಲಕ ಕಾರ್ಯಾಚರಣೆ ನಡೆಸಿ ಆತನ ಶವವನ್ನು ಕೊಳದಿಂದ ಮೇಲಕ್ಕೆ ಎತ್ತಲಾಗಿದೆ. ಆತ ಪೊಲೀಸರ ಕೈಯಿಂದ ಪರಾರಿಯಾಗಿದ್ದು ಹೇಗೆ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.