ರಾಜ್ಯಪಾಲರು ಸರ್ಕಾರದ ವಿರುದ್ಧ ಇರೋದು ಸ್ಪಷ್ಟ – ಪರಮೇಶ್ವರ್ ಆರೋಪ

Public TV
2 Min Read
G PARAMESHWAR

ಬೆಂಗಳೂರು: ರಾಜ್ಯಪಾಲರಿಂದ ಬಿಲ್‌ಗಳು ವಾಪಸ್ ಕಳುಹಿಸಿರುವುದನ್ನ ನೋಡಿದರೆ ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಸರ್ಕಾರ ಮತ್ತು ರಾಜ್ಯಪಾಲರಿಗೆ (Governor) ಹೊಂದಾಣಿಕೆ ಇಲ್ಲದಿದ್ದರೆ ಇಂತಹ ಬೆಳವಣಿಗೆ ನಡೆಯುತ್ತೆ. ಒಂದೆರಡು ಬಿಲ್ ಸ್ಪಷ್ಟೀಕರಣ ಕೇಳಿದ್ದು ಬಿಟ್ಟರೆ ಹೀಗೆ ಬಲ್ಕ್ ಆಗಿ ವಾಪಸ್ ಕಳಿಸಿರಲಿಲ್ಲ. ಸಾಮಾನ್ಯ ಬಿಲ್ ಕೂಡ ವಾಪಸ್ ಕಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಚಾಕುವಿನಿಂದ ಇರಿದು ಪತ್ನಿ ಕೊಲೆ – ಟೆರೇಸ್‌ನಿಂದ ಬಿದ್ದಳು ಎಂದು ಕಥೆ ಕಟ್ಟಿದ ಪತಿ

ಇನ್ನು ಹಿಂದಿನ ಸರ್ಕಾರದ ಹಗರಣ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸುಮಾರು ಹಗರಣ ಬೆಳಕಿಗೆ ಬಂದಿವೆ. ಒಂದೊಂದಾಗಿಯೇ ತನಿಖೆ ಮಾಡಲು ಮುಂದಾಗುತ್ತಾ ಇದ್ದೇವೆ. ಒಂದು ಹಂತ ತಲುಪಿದಾಗ ತನಿಖೆ ಮಾಡಿ ಚಾರ್ಜ್ ಶೀಟ್ ಹಾಕುತ್ತಿದ್ದೇವೆ ಎಂದರು. ಇದನ್ನೂ ಓದಿ: ಚಿನ್ನದ ನಾಡು ಕೆಜಿಎಫ್‌ನ ಬಿಜಿಎಂಎಲ್ ಪ್ರದೇಶದಲ್ಲಿ ಕಸ ಸುರಿಯಲು ಬಿಬಿಎಂಪಿ ಪ್ಲಾನ್!

ಇನ್ನೊಂದೆಡೆ ಜಿಂದಾಲ್‌ಗೆ ಭೂಮಿ ಕೊಡುವ ವಿಚಾರವಾಗಿ ಹಿಂದೆ ನಾವು ವಿರೋಧ ಮಾಡಿದ್ದು ನಿಜ. ಕೆಲವು ಪ್ರಶ್ನೆಗಳನ್ನ ನಾವು ಕೇಳಿದ್ದೆವು. ಆದರೆ ಈಗ ಅದಕ್ಕೆ ಸ್ಪಷ್ಟೀಕರಣ ಕೂಡ ಸಿಕ್ಕಿದೆ ಎಂದು ಸಚಿವರು ಹೇಳಿದರು. ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಕೋರ್ಟ್ ಕೂಡ ಆದೇಶ ಮಾಡಿದೆ. ಬೆಲೆಯಲ್ಲೂ ಕೂಡ ಒಂದಿಷ್ಟು ಸ್ಪಷ್ಟತೆ ಸಿಕ್ಕಿದೆ. ಗ್ಲೋಬಲ್ ಇನ್ವೆಸ್ಟರ್ ಮಾಡುತ್ತೇವೆ. ಪ್ರಪಂಚದಾದ್ಯಂತ ಇದರಲ್ಲಿ ಭಾಗಿಯಾಗುತ್ತಾ ಇದ್ದಾರೆ. ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಅವರಿಗೆ ಇರುತ್ತದೆ. ಇರುವವರನ್ನು ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ. ನಾವು ಒಂದಿಷ್ಟು ಪ್ರೊತ್ಸಾಹ ಕೊಡದಿದ್ದರೆ ಹೇಗೆ, ಪ್ರೋತ್ಸಾಹ ಕೊಡದಿದ್ದರೆ ರಾಜ್ಯ ಬಿಟ್ಟು ಹೋಗುತ್ತಾರೆ ಎಂದರು. ಇದನ್ನೂ ಓದಿ: ಅಜ್ಮೀರ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆ

ತಮಿಳುನಾಡು ಆಂಧ್ರದಲ್ಲಿ ಫ್ರೀ ಲ್ಯಾಂಡ್ ಕೊಡುತ್ತಾರೆ. ನಾವು ಕೊಟ್ಟಿಲ್ಲ ಅಂದರೆ ಅವರು ಕರೀತಾರೆ. ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ಬಿಟ್ಟು ಹೋಗ್ತೀವಿ ಅಂದಿದ್ದರು ಎಂದು ಹೇಳಿದರು. ಇದನ್ನೂ ಓದಿ:  NZ vs SL Test Series | ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ 6 ದಿನಗಳ ಟೆಸ್ಟ್ ಪಂದ್ಯ!

Share This Article