ಬಳ್ಳಾರಿ: ಅಜ್ಮೀರ್ ಯಾತ್ರೆಗೆ (Ajmer Yatra) ಹೋಗಿದ್ದ ಬಳ್ಳಾರಿಯ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಜಯನಗರದಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ.
ಜಿಲ್ಲೆಯ ಜಯನಗರದ ಅಪಾಟರ್ಮೆಂಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಎಸ್ ನಜೀರ್ ಅಹಮದ್(೫೦), ಮುನಿಯಾರ್ ರೊಖಾಯಾ(೪೭), ಸಾನಿಯ ಕೌಸರ್(೨೧), ಅಂಜುಮ್(೧೫) ನಾಪತ್ತೆಯಾದವರು.
ಜುಲೈ 6ರಂದು ಅಜ್ಮೀರ್ ಯಾತ್ರೆಗೆ ಹೋಗಿ ಬರ್ತಿವಿ ಎಂದು ಹೇಳಿ ಕುಟುಂಬದ ನಾಲ್ವರು ಹೋಗಿದ್ದರು. ಯಾತ್ರೆಗೆ ಹೋಗಿ ತಿಂಗಳು ಕಳೆದರೂ ವಾಪಾಸ್ ಬರದೇ ಇರುವುದು ಕುಟುಂಬಸ್ಥರಲ್ಲಿ ಗಾಬರಿಯನ್ನುಂಟುಮಾಡಿದೆ.
ಅವರನ್ನು ಸಂಪರ್ಕಿಸಲೂ ಎಷ್ಟೇ ಪ್ರಯತ್ನಪಟ್ಟರೂ ಸಂಪರ್ಕಕ್ಕೆ ಸಿಗದೇ ಇರುವುದು ಅವರಲ್ಲಿ ಭಯ ಹೆಚ್ಚಿಸಿದೆ. ನಾಲ್ವರನ್ನು ಪತ್ತೆ ಹಚ್ಚುವ ಸಲುವಾಗಿ ಸದ್ಯ ಕುಟುಂಬಸ್ಥರು ಬಳ್ಳಾರಿಯ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.