Viral Video| ಶವಾಗಾರದಲ್ಲೇ ಜೋಡಿಗಳ ಮಿಲನ ಮಹೋತ್ಸವ!

Public TV
2 Min Read
LOVERS 1 1

ನೋಯ್ಡಾ: ಇತ್ತೀಚಿಗೆ ಎಲ್ಲೆಡೆ ಕಾಮುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಅನೇಕ ಪ್ರಕರಣಗಳು ಪ್ರತಿದಿನ ಕಾಣಸಿಗುತ್ತಿವೆ. ಅದೇ ರೀತಿ ಇದೀಗ ನೋಯ್ಡಾದ (Noida) ಆಸ್ಪತ್ರೆಯೊಂದರ ಶವಾಗಾರದಲ್ಲಿ (Mortuary) ಶವಗಳ ಮುಂದೇಯೇ ಕ್ಲೀನರ್ ಹಾಗೂ ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಯಲ್ಲಿ ಮುಳುಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗಿದೆ.

ನೋಯ್ಡಾ ಸೆಕ್ಟರ್ 94ರ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆಂದು ಇರಿಸಿದ್ದ ಶವದ ಮುಂದೆಯೇ ಆಸ್ಪತ್ರೆಯ ಕ್ಲೀನರ್ ಮತ್ತು ಮಹಿಳೆಯೊಬ್ಬಳು ಅಸಹಜ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಕುರಿತ 6.17 ನಿಮಿಷದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಶವ ಇರುವ ಸ್ಟ್ರೆಚರ್ ಕೆಳಗೆ ಕ್ಲೀನರ್ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಇದಕ್ಕೆ ಮಹಿಳೆ ಸಹ ಅಡ್ಡಿಪಡಿಸುವುದು ಕಂಡುಬಂದಿಲ್ಲ. ಇದರಿಂದ ಇದು ಬಲತ್ಕಾರವಾಗಿ ನಡೆಯುತ್ತಿದ್ದ ಕ್ರಿಯೆಯಲ್ಲ ಎಂಬುದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಸಂಸದ ಕಾಗೇರಿ ಪ್ರಯತ್ನ – ಪ್ರಧಾನಿ ಪರಿಹಾರ ನಿಧಿಯಿಂದ ಶಿರೂರು ಸಂತ್ರಸ್ತರಿಗೆ ವಿಶೇಷ ಅನುದಾನಕ್ಕೆ ಅನುಮತಿ

ಮಹಿಳೆ ಜೊತೆ ಅಸಹಜ ಸ್ಥಿತಿಯಲ್ಲಿದ್ದ ಕ್ಲೀನರ್ ಅನ್ನು ಈ ವರ್ಷದ ಜೂನ್‌ನಲ್ಲಿ ಡಂಕೌರ್ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕೆಲಸಕ್ಕೆ ನೇಮಿಸಲಾಗಿತ್ತು. ಇನ್ನು ಆ ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವೀಡಿಯೋದಲ್ಲಿರುವ ಮಹಿಳೆ ಹೊರಗಿನವಳು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನೂ ಓದಿ: Ramanagara | ನೇಣು ಬಿಗಿದುಕೊಂಡು ವಕೀಲೆ ಆತ್ಮಹತ್ಯೆ – ಕಾರಣ ಸಸ್ಪೆನ್ಸ್‌!

ಇನ್ನು ಈ ಶವಾಗಾರಕ್ಕೆ ಪ್ರತಿದಿನ ಐದರಿಂದ ಏಳು ಶವಗಳು ಮರಣೋತ್ತರ ಪರೀಕ್ಷೆಗಾಗಿ ಬರುತ್ತವೆ. ಇವುಗಳಲ್ಲಿ ಮಹಿಳೆಯರು, ಹದಿಹರೆಯದವರು, ಹುಡುಗಿಯವರು ಮತ್ತು ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರ ಶವಗಳು ಸೇರಿವೆ. ಈ ಶವಗಾರದಲ್ಲಿ ಇಬ್ಬರು ಕಾವಲುಗಾರರು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿದೆ `ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ’ – ಒಬ್ಬಬ್ಬರ ಬಳಿ ಇರೋ ಆಸ್ತಿ ಎಷ್ಟು?

Share This Article