ಮಂತ್ರಾಲಯದಲ್ಲಿ ಭಾರೀ ಮಳೆ – ಮಠದ ಪ್ರಾಂಗಣದಲ್ಲೇ ಮಲಗಿದ ಭಕ್ತರು

Public TV
1 Min Read
Heavy rain in Mantralaya Devotees sleeping in the temple premises 1

ರಾಯಚೂರು: ಮಂತ್ರಾಲಯದಲ್ಲಿ(Mantralayam) ಬೆಳಗಿನ ಜಾವ 2 ಗಂಟೆಯಿಂದ ಜೋರು ಮಳೆ ಸುರಿದಿದ್ದು, ರಾತ್ರಿ ಮಠದ ಅಂಗಳದಲ್ಲೇ ಮಲಗಿದ್ದ ನೂರಾರು ಭಕ್ತರು ಮಳೆಯಿಂದಾಗಿ ಪರದಾಡಿದ್ದಾರೆ.

ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swamy) 35ನೇ ಆರಾಧನಾ ಮಹೋತ್ಸವ ಹಿನ್ನೆಲೆ ರಾಜ್ಯದ ಮೂಲೆಗಳಿಂದ ಭಕ್ತರು ಮಠಕ್ಕೆ ಆಗಮಿಸಿದ್ದಾರೆ. ಬೆಳಗಿನ ಜಾವದ ಮಳೆಯಿಂದಾಗಿ ಮಲಗಲು ಜಾಗವಿಲ್ಲದೇ ಪರದಾಡಬೇಕಾಯಿತು. ಇದನ್ನೂ ಓದಿ: ಕೋಟಿಗಟ್ಟಲೇ ಅನುದಾನ ಕೊಟ್ಟರೂ ನೀಗದ ಸಮಸ್ಯೆ – 4 ದಿನಗಳಿಂದ ಮಂಡ್ಯದ ಮೈಶುಗರ್ ಸ್ಥಗಿತ

Heavy rain in Mantralaya Devotees sleeping in the temple premises 2

ಕೊನೆಗೆ ಭಕ್ತರ ಬಳಿಗೆ ಆಗಮಿಸಿದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಪರ್ಯಾಯ ವ್ಯವಸ್ಥೆ ಮಾಡಿಸಿದ್ದಾರೆ. ಮಠದ ಪ್ರಾಕಾರ, ಪ್ರವಚನ ಮಂಟಪದಲ್ಲಿ ಭಕ್ತರಿಗೆ ಮಲಗಲು ಮಠದ ಸಿಬ್ಬಂದಿ ಅನುವು ಮಾಡಿಕೊಟ್ಟಿದ್ದಾರೆ. ಇಂದು ರಾಯರ ಪೂರ್ವಾರಾಧನೆ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ರಾತ್ರಿಯೇ ಆಗಮಿಸಿದ ಭಕ್ತರು ಮಠದ ಆವರಣದಲ್ಲಿ ಮಲಗಿದ್ದರು. ಆದರೆ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಸುರಿದ ಭಾರೀ ಮಳೆ ಭಕ್ತರಿಗೆ ಅನಾನುಕೂಲ ತಂದಿಟ್ಟಿತು. ಇದನ್ನೂ ಓದಿ: ಚುರುಕು ಪಡೆದ ಮುಡಾ ಹಗರಣದ ತನಿಖೆ – ಮೂರು ಪಕ್ಷದ ನಾಯಕರಿಗೆ ಈಗ ಭಯ

ಗುರು ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾದ ದಿನದ ಮುನ್ನಾ ದಿನವನ್ನು ಪೂರ್ವಾರಾಧನೆಯಾಗಿ ಇಂದು ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ.

 

Share This Article