ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

Public TV
1 Min Read
KANGANA RANAUT

ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಸದ್ಯ ‘ಎಮರ್ಜೆನ್ಸಿ’ (Emergency Film) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದ ವೇಳೆ, ಎಲ್ಲರಿಗೂ ಸಂಗಾತಿ ಇರಬೇಕು. ನಾನು ಕೂಡ ಮದುವೆಯಾಗುತ್ತೇನೆ (Wedding) ಎಂದು ನಟಿ ಮಾತನಾಡಿದ್ದಾರೆ.

Kangana Ranaut

ಸಂದರ್ಶನದಲ್ಲಿ ಮದುವೆ ಕುರಿತು ಎದುರಾದ ಪ್ರಶ್ನೆಗೆ ಎಲ್ಲರಿಗೂ ಸಂಗಾತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಸಂಗಾತಿ ಇಲ್ಲದೆ ಬದುಕೋದು ಕಷ್ಟ ಎಂದಿದ್ದಾರೆ ಕಂಗನಾ. ಆದರೆ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲು. ನಾನು ಕೂಡ ಮದುವೆಗೆ ಸಿದ್ಧವಾಗಿದ್ದೇನೆ. ಆದರೆ ಆರ್ಗೆನಿಕ್ ಆಗಿ ಲವ್ ಆಗಲಿ ಎಂದು ಭವಿಷ್ಯದ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಪುತ್ರನ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

Kangana Ranaut

ಈ ವೇಳೆ, ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಪ್ರಯೋಜನಗಳನ್ನು ವಿವರಿಸಿದ್ದಾರೆ. ನೀವು ವಯಸ್ಸಾದಂತೆ, ಪರಸ್ಪರ ಹೊಂದಿಕೊಳ್ಳಲು ನಿಮಗೆ ಹೆಚ್ಚು ಕಷ್ಟವಾಗುತ್ತದೆ ಎಂದಿದ್ದಾರೆ. ನೀವು ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಹೊಂದಿಕೊಳ್ಳೋದು ಅದು ತುಂಬಾ ಸುಲಭ. ಹಳ್ಳಿಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ ನಿಮ್ಮ ಉತ್ಸಾಹವು ತುಂಬಾ ತೀವ್ರವಾಗಿರುತ್ತದೆ ಎಂದು ನಟಿ ಮಾತನಾಡಿದ್ದಾರೆ.

ಅಂದಹಾಗೆ, ಕಂಗನಾ ನಟಿಸಿ, ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಇದೇ ಸೆ.6ರಂದು ರಿಲೀಸ್ ಆಗ್ತಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಜನರ ಮನಗೆದ್ದಿದೆ.‌ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

Share This Article