ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ- ಖರೀದಿಸುವಾಗ ಎಚ್ಚರವಾಗಿರಿ

Public TV
1 Min Read
Cement Garlic

ಮುಂಬೈ: ಬೆಳ್ಳುಳ್ಳಿ (Garlic) ಸಿಪ್ಪೆ ಸುಲಿಯುತ್ತಿರುವಾಗ ನಕಲಿ ಬೆಳ್ಳುಳ್ಳಿ ಎಂದು ಗೊತ್ತಾಗಿರುವ ಘಟನೆಯೊಂದು ಮಹಾರಾಷ್ಟ್ರದ (Maharashtra)  ಅಕೋಲಾ ಜಿಲ್ಲೆಯಲ್ಲಿ (Akola District)  ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ತುಂಬಾ ಗಟ್ಟಿಯಾಗಿರುವ ಅನುಭವವಾಗಿದ್ದು, ಒಳಗಡೆ ನೋಡಿದಾಗ ಸಿಮೆಂಟ್ (Cement) ಕಂಡುಬಂದಿದೆ.ಇದನ್ನೂ ಓದಿ: ಒಡಿಶಾದಲ್ಲಿ ಸಿಡಿಲಿನ ಅಬ್ಬರ – 2 ದಿನದಲ್ಲಿ 15 ಮಂದಿ ಬಲಿ

ದೇಶದಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ದರ ೩೦೦-೩೫೦ ರೂ.ಗೆ ಏರಿಕೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿ ಮಾರಾಟವಾಗಿರುವ ಘಟನೆಗಳು ಪತ್ತೆಯಾಗಿವೆ. ನಿಜವಾದ ಬೆಳ್ಳುಳ್ಳಿ ರೀತಿಯಲ್ಲಿ ಸಿಮೆಂಟ್‌ನಿಂದ ಬೆಳ್ಳುಳ್ಳಿ (Cement Garlic) ತಯಾರಿಸಿ, ನಂತರ ಅದಕ್ಕೆ ಬಿಳಿ ಬಣ್ಣವನ್ನು ಲೇಪಿಸುತ್ತಾರೆ.ಇದನ್ನೂ ಓದಿ: ಡ್ರಾಪ್‌ ನೆಪದಲ್ಲಿ ಲೈಂಗಿಕ ದೌರ್ಜನ್ಯ – ಡ್ಯಾನ್ಸ್‌ ಕೊರಿಯೋಗ್ರಾಫರ್‌ ಅರೆಸ್ಟ್‌

ಅಸಲಿ ಬೆಳ್ಳುಳ್ಳಿಯ ಜೊತೆಗೆ ನಕಲಿ ಬೆಳ್ಳುಳ್ಳಿಯನ್ನು ಸೇರಿಸಿ, ತೂಕ ಹೆಚ್ಚಿಸುವ ಮೂಲಕ ವ್ಯಾಪಾರಿಗಳನ್ನು ವಂಚನೆ ಮಾಡಲಾಗುತ್ತಿದೆ. ನಕಲಿ ಬೆಳ್ಳುಳ್ಳಿ ಒಡೆದಾಗ ಅದರಲ್ಲಿ ಸಿಮೆಂಟ್ ಪುಡಿ ಉದುರುತ್ತಿವೆ.

Share This Article