ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿಗಳ (Guarantee Scheme) ಪರಿಷ್ಕರಣೆ ಆಗಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ (Basavaraj Rayareddy) ಸ್ಪಷ್ಟಪಡಿಸಿದ್ದಾರೆ.
ಸಿಎಂ (CM Siddaramaiah) ಜೊತೆ ಅರ್ಥಿಕ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, ಗ್ಯಾರಂಟಿ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಗ್ಯಾರಂಟಿ ಯೋಜನೆಯಿಂದ ನಮಗೇನು ತೊಂದರೆ ಆಗಿಲ್ಲ. ಹಣಕಾಸಿನ ಒತ್ತಡ ಇದ್ದೇ ಇದೆ ಎಂದು ನಾನು ಹೇಳಿಕೊಂಡು ಬಂದಿದ್ದೇನೆ. ಮುಂದಿನ ವರ್ಷದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಮುಂದಿನ ವರ್ಷ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟುತ್ತದೆ. ಹೀಗಾಗಿ ಗ್ಯಾರಂಟಿಗೆ ನಮಗೆ ಸಮಸ್ಯೆ ಆಗಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಕೋಟಿ ಕೋಟಿ ವಂಚನೆ – ದುಬೈ ಮೂಲದ ಐವರು ಅರೆಸ್ಟ್
ಗ್ಯಾರಂಟಿ ಯೋಜನೆಗಳಲ್ಲಿ ಸರ್ಕಾರಿ ನೌಕರರು ಲಾಭ ಪಡೆಯುತ್ತಿದ್ದಾರೆ. ಅದರ ಬಗ್ಗೆ ಕೆಲವರು ಹೇಳಿದ್ದಾರೆ ಅಷ್ಟೇ. ಆದರೆ ಸಿಎಂ ಗ್ಯಾರಂಟಿ ಪರಿಷ್ಕರಣೆ ಸದ್ಯದ ಪರಿಸ್ಥಿತಿಯಲ್ಲಿ ಮಾಡೋದು ಬೇಡ ಅನ್ನೋ ಮನೋಭಾವನೆಯಲ್ಲಿ ಇದ್ದಾರೆ. ಪರಿಷ್ಕರಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಪರಿಷ್ಕರಣೆ ಮಾಡಲು ಯಾವುದೇ ಕಮಿಟಿ ಆಗಿಲ್ಲ. ಯಾವುದೇ ಸಮಸ್ಯೆ ಇಲ್ಲ. ಗ್ಯಾರಂಟಿ ಬಗ್ಗೆ ವಾರಂಟಿಯನ್ನು ನಾವು ಕೊಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಪರಿಷ್ಕರಣೆ ಆಗಲ್ಲ. ಪರಿಷ್ಕರಣೆ ಆಗುವ ಅವಶ್ಯಕತೆ ಇಲ್ಲ ಎಂಬುದು ನನ್ನ ಸಲಹೆ ಎಂದು ತಿಳಿಸಿದರು. ಇದನ್ನೂ ಓದಿ: 2027 ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ: ಡಾ. ಗೀತಾ ಗೋಪಿನಾಥ್
ಗ್ಯಾರಂಟಿಗಳಲ್ಲಿ ಯಾವುದೇ ಬದಲಾವಣೆ ಆಗಲ್ಲ. ಸರ್ಕಾರಿ ನೌಕರರು ಲಾಭ ಪಡೆಯೋ ಬಗ್ಗೆಯೂ ಇದೆ. ಆದರೆ ಅದರ ಬಗ್ಗೆ ಚರ್ಚೆ ಆಗಿಲ್ಲ. ಸಲಹೆಗಳು ಬರುತ್ತವೆ. ಆದರೆ ಹಾಗಂತ ಯಾವುದೇ ತೀರ್ಮಾನ ಆಗಿಲ್ಲ. ಪರಿಷ್ಕರಣೆಯೂ ಆಗಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿಟಿಯಲ್ಲಿ ಕಳ್ಳತನ, ಕಾಡಿನಲ್ಲಿ ವಾಸಸ್ಥಾನ – ಬೆಂಗಳೂರಲ್ಲಿ ಐನಾತಿ ಕಳ್ಳ ಅರೆಸ್ಟ್