ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಛಾವಾ’ (Chhava) ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಗೆಟಪ್‌ನಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದು, ನಟನ ಖಡಕ್ ಡೈಲಾಗ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಬಹುನಿರೀಕ್ಷಿತ ‘ಛಾವಾ’ ಸಿನಿಮಾದ ಟೀಸರ್‌ನಲ್ಲಿ ಯುದ್ಧದ ದೃಶ್ಯಗಳಿಂದ ತುಂಬಿದೆ. ವಿಕ್ಕಿ ಕೌಶಲ್ ಆ್ಯಕ್ಷನ್ ಅವತಾರಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ರಶ್ಮಿಕಾ ಪಾತ್ರದ ಲುಕ್ ಸಣ್ಣ ಝಲಕ್ ಅನ್ನು ತೋರಿಸಲಾಗಿದೆ. ಇದನ್ನೂ ಓದಿ:‘ದಿ ಫ್ಯಾಮಿಲಿ ಮ್ಯಾನ್ 2’ ನಿರ್ದೇಶಕನ ಜೊತೆ ಸಮಂತಾ ಡೇಟಿಂಗ್
#Chhava teaser ????????#VickyKaushal in a never-seen-before avatar ???? ???? #ChhavaTeaser #Chhava#LaxmanUtekar #Chava #MaddockFilms #Stree2 #ShraddhaKapoor #AkshayKumar???? #MrBachchanOnAug15th #DoubleismartonAug15th #GOLD pic.twitter.com/7XjW3GorRj
— ???????? PREM KUMAR YADAV ???????? (@Indian_6789) August 15, 2024
ಅಂದಹಾಗೆ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದಾರೆ. ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ಯಾವ ರೀತಿ ನಿರ್ವಹಿಸುತ್ತಿದ್ದರು ಎಂಬುದು ಕಥೆಯ ಹೈಲೈಟ್.
ಇನ್ನೂ ವಿಕ್ಕಿ, ರಶ್ಮಿಕಾ ಮೊದಲ ಬಾರಿ ಜೊತೆಯಾಗಿ ನಟಿಸಿರುವ ‘ಛಾವಾ’ ಸಿನಿಮಾ ಡಿಸೆಂಬರ್ 6ರಂದು ರಿಲೀಸ್ ಆಗುತ್ತಿದೆ. ಇನ್ನೂ ಈ ಸಿನಿಮಾಗಾಗಿ ಇಬ್ಬರೂ ಮರಾಠಿ ಭಾಷೆಯನ್ನು 4 ವಾರಗಳಲ್ಲಿ ಕಲಿತಿರುವುದು ವಿಶೇಷ.