ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್‌

Public TV
2 Min Read
Manu Bhaker Neeraj Chopra

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ತಾನು ನಿಕಟವಾಗಿದ್ದೇನೆ ಎಂಬ ವದಂತಿಯನ್ನು ಶೂಟಿಂಗ್ ಸ್ಟಾರ್ ಮನು ಭಾಕರ್ ಅಲ್ಲಗಳೆದಿದ್ದಾರೆ. ಕೆಲ ದಿನಗಳ ಹಿಂದೆ ಪ್ಯಾರಿಸ್‌ನಲ್ಲಿ ನೀರಜ್ ಚೋಪ್ರಾ (Neeraj Chopra) ಅವರೊಂದಿಗೆ ಮನು ಭಾಕರ್‌ (Manu Bhaker) ಮಾತನಾಡುತ್ತಿರುವ ದೃಶ್ಯಗಳನ್ನು ಉಲ್ಲೇಖಿಸಿ ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಇಬ್ಬರೂ ಮದುವೆಯಾಗ್ತಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿತ್ತು. ಇದನ್ನು ಮನು ಭಾಕರ್ ತಂದೆ ನಿರಾಕರಿಸಿದ್ದರು.

Manu Bhaker Neeraj Chopra 1

ವದಂತಿ ಶುರುವಾಗಿದ್ದು ಹೇಗೆ..?
ನೀರಜ್ ಚೋಪ್ರಾ ಆತ್ಮೀಯ ಗೆಳೆಯನಾಗಿದ್ದು, ಈ ರೀತಿಯ ಕ್ರೀಡಾಕೂಟಗಳಲ್ಲಿ ಮಾತ್ರ ಅವರೊಂದಿಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ಮನು ಭಾಕರ್ ವಿವರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭಕ್ಕೂ ಮುನ್ನ ಇಬ್ಬರೂ ಮಾತನಾಡಿರುವ ವಿಡಿಯೋ ವೈರಲ್ ಆಗಿತ್ತು. ಜೊತೆಗೆ ಮನು ಭಾಕರ್‌ ತಾಯಿಯೂ ನೀರಜ್‌ ಚೋಪ್ರಾ ಜೊತೆ ಕೈ ಹಿಡಿದು ಆತ್ಮೀಯವಾಗಿ ಮಾತನಾಡಿದ ವೀಡಿಯೋ ವೈರಲ್‌ ಆಗಿತ್ತು. ಇದನ್ನೂ ಓದಿ: ವಿನೇಶ್‌ ಫೋಗಟ್‌ ಅರ್ಜಿ ವಜಾ – ಸಿಗಲ್ಲ ಬೆಳ್ಳಿ ಪದಕ

ಕ್ರೀಡಾಕೂಟಗಳಲ್ಲಿ ಮಾತ್ರ ಭೇಟಿ!:
ನನಗೆ ಈ ವೀಡಿಯೋಗಳ ಬಗ್ಗೆ ಗೊತ್ತಿಲ್ಲ. 2018 ರಿಂದ ನಾವು ಇಂತಹ ಕ್ರೀಡಾಕೂಡ ನಡೆಯುವ ಸ್ಥಳಗಳಲ್ಲಿ ಭೇಟಿಯಾಗುತ್ತೇವೆ. ಅದನ್ನು ಹೊರತುಪಡಿಸಿ ನಾವು ಎಲ್ಲೂ ಭೇಟಿಯಾಗಲ್ಲ. ಈ ರೀತಿಯ ಪಂದ್ಯಾವಳಿಗಳಲ್ಲಿ ನೋಡಿದಾಗ ನಾವು ಮಾತನಾಡುತ್ತೇವೆ. ಅದನ್ನು ಬಿಟ್ಟರೆ ಈ ವಿಚಾರದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಮನು ಭಾಕರ್ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಮದುವೆ ವಯಸ್ಸಾಗಿಲ್ಲ:
ಇದಕ್ಕೂ ಮುನ್ನ ಮನು ಭಾಕರ್ ಅವರ ತಂದೆ ಕಿಶನ್ ಭಾಕರ್, 22 ವರ್ಷದ ಮನು ಭಾಕರ್ ಗೆ ಇನ್ನೂ ಮದುವೆಯಾಗುವ ವಯಸ್ಸಾಗಿಲ್ಲ. ಮನು ಇನ್ನೂ ತುಂಬಾ ಚಿಕ್ಕವಳು. ಈ ಹಂತದಲ್ಲಿ ಮದುವೆ ಬಗ್ಗೆ ಯೋಚಿಸಿಯೂ ಇಲ್ಲ. ಮನುವಿನ ತಾಯಿ ಕೂಡಾ ನೀರಜ್ ಚೋಪ್ರಾರನ್ನು ಮಗನಂತೆ ಕಾಣುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಸ್ವಾತಂತ್ರ್ಯ ದಿನದ ಸಂಭ್ರಮ – ದೇಶಭಕ್ತಿ ಮೆರೆದ ಟೀಂ ಇಂಡಿಯಾ ಸ್ಟಾರ್ಸ್‌!

Share This Article