‘ರಾಯಲ್’ ಆಗಿ ಕಥೆ ಹೇಳೋಕೆ ನಟ ವಿರಾಟ್ (Viraat) ಮತ್ತು ದಿನಕರ್ ತೂಗುದೀಪ್ (Dinakar Thoogudeepa) ರೆಡಿಯಾಗಿದ್ದಾರೆ. ಸದ್ಯ ಈ ಸಿನಿಮಾದ ಮೊದಲ ಹಾಡು ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ. ಲಲನೆಯರ ಜೊತೆ ವಿರಾಟ್ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.
‘ನಾನೇ ಕೃಷ್ಣ, ನಾನೇ ಶ್ಯಾಮ’ ಎಂಬ ಹಾಡು ರಿಲೀಸ್ ಆಗಿದೆ. ಈ ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ವಿ.ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಈ ಕಲರ್‌ಫುಲ್ ಹಾಡಿಗೆ ವಿರಾಟ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಎಂಟ್ರಿ
- Advertisement
Listen to the Style anthem of #Royal ????#NaaneKrishnaNaaneShaama OUT NOW! https://t.co/c4S3oZ3WcN@viraat_official @JayannaFilms @itssanjanaanand #RaviVarma @charanrajmr2701 @sanjheg #SankethMysore #AnilMandya #KMPrakash
— Dinakar Thoogudeepa (@dinakar219) August 14, 2024
- Advertisement
ಈ ಚಿತ್ರದಲ್ಲಿ ವಿರಾಟ್ ಪಕ್ಕಾ ಮಾಸ್ & ಎನರ್ಜಿಟಿಕ್ ಹೀರೋ ಆಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ‘ಕಿಸ್’ ಹೀರೋ ವಿರಾಟ್‌ಗೆ ನವಗ್ರಹ, ಜೊತೆ ಜೊತೆಯಲಿ, ಸಾರಥಿ ಸಿನಿಮಾಗಳ ನಿರ್ದೇಶಕ ದಿನಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಕಮ್ ರೊಮ್ಯಾಂಟಿಕ್ ಸಿನಿಮಾ ಆಗಿದೆ.
ಇನ್ನೂ ವಿರಾಟ್‌ಗೆ ನಾಯಕಿಯಾಗಿ ಸಲಗ ಸುಂದರಿ ಸಂಜನಾ ಆನಂದ್ (Sanjana Anand) ಜೋಡಿಯಾಗಿದ್ದಾರೆ. ಚಿತ್ರದಲ್ಲಿ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಅಭಿಲಾಷ್ ಸೇರಿದಂತೆ ಅನೇಕರು ನಟಿಸಿದ್ದಾರೆ.