ಮೈಸೂರು: ಅಯೋಧ್ಯೆಯಲ್ಲಿ (Ayodhya Ram Mandir) ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರಿಗೆ ಅಮೆರಿಕ (USA) ವೀಸಾ ನೀಡಲು ನಿರಾಕರಿಸಿದೆ.
ಹೌದು. ಅಮೇರಿಕದಲ್ಲಿರುವ ಕನ್ನಡಿಗರು ನಡೆಸುವ 12ನೇ ವಿಶ್ವ ಅಕ್ಕ (Association of Kannada Kootas of America -AKKA) ಸಮ್ಮೇಳನದ ಮುಖ್ಯ ಅತಿಥಿಯಾಗಿ ಅರುಣ್ ಯೋಗಿರಾಜ್ ಅಮೆರಿಕಕ್ಕೆ ತೆರಳಬೇಕಿತ್ತು. ಈ ಸಂಬಂಧ ಅವರು ವೀಸಾ (Visa) ಪಡೆಯಲು ಅರ್ಜಿ ಹಾಕಿದ್ದರು. ಈ ವೇಳೆ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ. ಇದನ್ನೂ ಓದಿ: ನಾಗಾರಾಧನೆ ವೇಳೆ ಭಾವೋದ್ವೇಗಕ್ಕೆ ಒಳಗಾದ ಹಿರಿಯ ನಟಿ ಜ್ಯೋತಿ
ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತಾ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ ಯಾವ ಕಾರಣಕ್ಕೆ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ.
ಅಮೇರಿಕದ ವರ್ಜೀನಿಯಾದ ರಿಚ್‌ಮಂಡ್‌ನಲ್ಲಿರುವ ಗ್ರೇಟರ್ ರಿಚ್‌ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆ.30 ರಿಂದ ಸೆ. 1ರವರೆಗೆ ಅಕ್ಕ ಸಮ್ಮೇಳನ ಆಯೋಜನೆಗೊಂಡಿದೆ.