ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್ (Darshan) ಮತ್ತು ಪವಿತ್ರಾ ಗೌಡ (Pavithra Gowda) ಸೇರಿ ಒಟ್ಟು 17 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆಗಾಗ ಅಮ್ಮನನ್ನು ನೋಡಲು ಪವಿತ್ರಾ ಪುತ್ರಿ ಖುಷಿ ಗೌಡ (Kushi Gowda) ಕೂಡ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಾ ಇರುತ್ತಾರೆ. ಇದೀಗ ಅಮ್ಮನನ್ನು ನೆನೆದು ಖುಷಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:’ಮೈ ಜಾನ್’ ಎಂದು ಪತ್ನಿ ಶ್ರೀದೇವಿ ಹುಟ್ಟುಹಬ್ಬಕ್ಕೆ ಬೋನಿ ಕಪೂರ್ ವಿಶ್
ಪವಿತ್ರಾ ಗೌಡರ ಮಗಳು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದು, ಅಮ್ಮನ ಬಗ್ಗೆ ಕೊಂಡಾಡಿದ್ದಾರೆ. ಅಮ್ಮ ನನ್ನ ಪ್ರೇರಣೆ, ಪರಿಸ್ಥಿತಿ ಎಷ್ಟೇ ಇದ್ದರೂ ಹೇಗೆ ಗಟ್ಟಿಯಾಗಿರಬೇಕೆಂದು ಕಲಿಸುತ್ತಾರೆ. ಅವರು ಯಾವಾಗಲೂ ತುಂಬಾ ಮುಕ್ತ ಮತ್ತು ಬೆಂಬಲ ನೀಡುತ್ತಾರೆ. ಅವರು ಶತಕೋಟಿಯಲ್ಲಿ ಒಬ್ಬರು. ಅವರಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅದೃಷ್ಟಶಾಲಿಯಾಗಿದ್ದೇನೆ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ ಅಂತ ಬರೆದುಕೊಂಡಿದ್ದಾರೆ.
ಸದ್ಯ ತಾಯಿ ನಡೆಸಿಕೊಂಡು ಹೋಗುತ್ತಿದ್ದ ‘ಫ್ಯಾಷನ್ ಬೋಟಿಕ್’ ಅನ್ನು ಖುಷಿ ನಡೆಸಿಕೊಂಡು ಹೋಗುತ್ತಿದ್ದಾರೆ.