ಕಾಲಿವುಡ್ ನಟ ಸೂರ್ಯ ನಟನೆಯ ‘ಕಂಗುವ’ (Kanguva Film) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹೀರೋ ಸೂರ್ಯ, ವಿಲನ್ ಆಗಿ ಬಾಬಿ ಡಿಯೋಲ್ (Bobby Deol) ಅಬ್ಬರಿಸಿದ ರೀತಿ ಮತ್ತು ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಝಲಕ್ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು 7ನೇ ಬಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ

View this post on Instagram
ಮೊಸಳೆಗಳಿಂದ ಕಚ್ಚಿಸಿಕೊಂಡರು ಕಂಗುವ ಪಾತ್ರಧಾರಿ ಸೂರ್ಯ ಮಾಸ್ ಆಗಿ ಎದ್ದು ಬರುವ ಲುಕ್ ಸಖತ್ ಆಗಿದೆ. ನಿನ್ನ ರಕ್ತ ಮತ್ತು ನನ್ನ ರಕ್ತ ಒಂದೇ ಎಂದು ಸೂರ್ಯ ಹೇಳುವ ಡೈಲಾಗ್ ಖಡಕ್ ಆಗಿ ಬಂದಿದೆ. ಬಾಬಿ ಡಿಯೋಲ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಶಿವ ನಿರ್ದೇಶನದಲ್ಲಿ ಸೂರ್ಯ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಸದ್ಯ ಅದ್ಧೂರಿ ಸಿನಿಮಾ ಮೇಕಿಂಗ್, ಸೂರ್ಯ ಮತ್ತು ಬಾಬಿ ಡಿಯೋಲ್ ಲುಕ್‌ನಿಂದ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. 300 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿರುವ ‘ಕಂಗುವ’ ಸಿನಿಮಾ ಈ ವರ್ಷದ ಅಂತ್ಯದಲ್ಲಿ ಅಬ್ಬರಿಸಲಿದೆ.

