ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 12 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

Public TV
1 Min Read
Bidar Police

ಬೀದರ್: ನಗರದ ಪೊಲೀಸರು (Bidar Police) ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಭಾಲ್ಕಿ, ಮೇಹಕರ್ ಮತ್ತು ಹುಮ್ನಾಬಾದ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು 11 ಕಳ್ಳತನದ ಪ್ರಕರಣಗಳನ್ನು ಭೇದಿಸಿ ಬಂಗಾರ, ಬೆಳ್ಳಿ (Silver), ದ್ವಿಚಕ್ರ ವಾಹನ ಹಾಗೂ ಎಮ್ಮೆ ಸೇರಿದಂತೆ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

Bidar Police 1

ಮಂದಿರ ಕಳ್ಳತನ ಪ್ರಕರಣದಲ್ಲಿ 11 ಗ್ರಾಂ ಬೆಳ್ಳಿ ಮತ್ತು 1 ಗ್ರಾಂ ಚಿನ್ನಾಭರಣ (Gold Jewellery) ಹಾಗೂ ತೆಲಂಗಾಣದಲ್ಲಿ ಕಳ್ಳತನವಾಗಿದ್ದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಮ್ಮೆ ಕಳ್ಳತನ ಪ್ರಕರಣ ಭೇದಿಸಿದ ಮೇಹಕರ್ ಠಾಣೆಯ ಪೊಲೀಸರು ಸೂಮಾರು 7 ಲಕ್ಷ ರೂ. ಬೆಲೆಬಾಳುವ ಎಮ್ಮೆ ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

Share This Article