ಬಾಲಿವುಡ್ ಬೆಡಗಿ ಮಾನುಷಿ ಚಿಲ್ಲರ್ (Manushi Chhillar) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಸಕ್ಸಸ್‌ಗಾಗಿ ಉತ್ತಮ ಅವಕಾಶಕ್ಕಾಗಿ ಎದುರು ನೋಡ್ತಿರೋ ಮಾನುಷಿಗೆ ಈಗ ಬಂಪರ್ ಆಫರ್‌ವೊಂದು ಸಿಕ್ಕಿದೆ. ಬಿಗ್ ಬಜೆಟ್ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ (Rajkumar Rao) ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ.
ವಿಭಿನ್ನ ಪ್ರೇಮಕಥೆಯಲ್ಲಿ ರಾಜ್‌ಕುಮಾರ್ ರಾವ್ ಮತ್ತು ಮಾನುಷಿ ಜೊತೆಯಾಗಿ ನಟಿಸಲಿದ್ದಾರೆ. ಈ ಜೋಡಿಗೆ ‘ಭಕ್ಷಕ್’ ಸಿನಿಮಾ ಡೈರೆಕ್ಟರ್ ಪುಲ್ಕಿತ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದೇ ಸೆಪ್ಟೆಂಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರವನ್ನು ಮುಂದಿನ ವರ್ಷ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದನ್ನೂ ಓದಿ:ಸಮಂತಾ ಪ್ರಪೋಸ್ ಮಾಡಿದ ದಿನಾಂಕದಂದೇ ಶೋಭಿತಾಗೆ ರಿಂಗ್ ತೊಡಿಸಿದ ನಾಗಚೈತನ್ಯ
ಸ್ತ್ರೀ, ಶ್ರೀಕಾಂತ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಾಜ್‌ಕುಮಾರ್ ರಾವ್‌ಗೆ ಮೊದಲ ಬಾರಿಗೆ ಮಾನುಷಿ ಜೋಡಿಯಾಗ್ತಿರೋದ್ರಿಂದ ಈ ಸಿನಿಮಾದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಫ್ಯಾನ್ಸ್‌ಗೆ ಇದೆ. ಇಬ್ಬರ ಕಾಂಬಿನೇಷನ್ ಅದ್ಯಾವ ರೀತಿ ಮೂಡಿ ಬರಲಿದೆ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.
ಅಂದಹಾಗೆ, ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದಲ್ಲಿ ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿಯಾಗಿ ಮಾನುಷಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕೆರಿಯರ್‌ಗೆ ಬ್ರೇಕ್ ಕೊಡುವಂತಹ ಸಿನಿಮಾ ಇನ್ನೂ ಸಿಕ್ಕಿಲ್ಲ.