DKD: ಧನುಷ್ ಡ್ಯಾನ್ಸ್ ನೋಡಿ ಫೋನ್ ಕರೆ ಮಾಡಿದ ಯಶ್

Public TV
1 Min Read
dhanush

ಕಿರುತೆರೆಯ ಜನಪ್ರಿಯ ಸೀರಿಯಲ್ ‘ಪುಟ್ಟಕ್ಕನ ಮಕ್ಕಳು’ ಹೀರೋ ಧನುಷ್ (Dhanush) ಇದೀಗ ‘ಡಾನ್ಸ್ ಕರ್ನಾಟಕ ಡಾನ್ಸ್’ (Dance Karnataka Dance) ವೇದಿಕೆಯಲ್ಲಿ ಸರ್ಪ್ರೈಸ್‌ವೊಂದು ಸಿಕ್ಕಿದೆ. ‘ಕೆಜಿಎಫ್’ (KGF) ಚಿತ್ರದ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದ ರಾಕಿ ಬಾಯ್‌ ಅಪ್ಪಟ ಅಭಿಮಾನಿ ಧನುಷ್‌ಗೆ ಕರೆ ಮಾಡಿ ಯಶ್ ಭೇಷ್ ಎಂದಿದ್ದಾರೆ. ಇದನ್ನೂ ಓದಿ:ಲುಂಗಿಯುಟ್ಟು ಗನ್ ಹಿಡಿದು ಬಂದ ಫಹಾದ್ ಫಾಸಿಲ್- ‘ಪುಷ್ಪ 2’ ಪೋಸ್ಟರ್ ಔಟ್

FotoJet 22

ಡಿಕೆಡಿ ವೇದಿಕೆಗೆ ಯಶ್ ಕರೆ ಮಾಡಿ, ಡ್ಯಾನ್ಸ್ ಚೆನ್ನಾಗಿ ಮಾಡಿದ್ದೀರಿ, ಸಖತ್ ಆಗಿತ್ತು. ಬೆಳೆಯುವವರಿಗೆ ಬೆನ್ನು ತಟ್ಟೋದು ಮುಖ್ಯ. ಶಿವಣ್ಣ ಅವರೇ ನಮಗೆ ಸ್ಪೂರ್ತಿ. ನಮ್ಮನ್ನೆಲ್ಲ ಮೀರಿಸಿ ನೀವು ಬೆಳೆದರೆ ಅದೇ ನಮಗೆ ನೀವು ಕೊಡುವ ಗೌರವ ಎಂದು ಯಶ್ ಫೋನ್ ಕರೆಯಲ್ಲಿ ಧನುಷ್‌ಗೆ ಹೇಳಿದ್ದಾರೆ. ಸದ್ಯ ಇದರ ಪ್ರೋಮೋ ತುಣುಕನ್ನು ವಾಹಿನಿ ಹಂಚಿಕೊಂಡಿದೆ. ಇದರ ಎಪಿಸೋಡ್ ಈ ವಾರಾಂತ್ಯ ಪ್ರಸಾರವಾಗಲಿದೆ.

yash 2

ಅಂದಹಾಗೆ, ಕಳೆದ ಎಪಿಸೋಡ್‌ನಲ್ಲಿ ಯಶ್ ನಟನೆಯ ‘ಕೆಜಿಎಫ್’ ಚಿತ್ರದ ‘ಧೀರ ಧೀರ ಸುಲ್ತಾನ’ ಹಾಡಿಗೆ ಧನುಷ್‌ ಡ್ಯಾನ್ಸ್ ಮಾಡಿದ್ದರು. ಯಶ್ ರೀತಿಯಲ್ಲಿ ಮ್ಯಾನರಿಸಂ ಇತ್ತು. ಈ ಡ್ಯಾನ್ಸ್ ನೋಡಿದ ಶಿವಣ್ಣ (Shivarajkumar) ಮಾತನಾಡಿ, ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರಾ. ನಾನು ಯಶ್‌ಗೆ ಫೋನ್ ಮಾಡಿ ನಿಮ್ಮ ಡ್ಯಾನ್ಸ್ ಬಗ್ಗೆ ಮಾತನಾಡ್ತೀನಿ ಅಂತ ಹೇಳಿದ್ದರು. ಅದರಂತೆ ಈ ವಾರ ಯಶ್ ಕಡೆಯಿಂದ ಧನುಷ್‌ಗೆ ಕರೆ ಬಂದಿದೆ.

ನನಗೆ ಯಶ್ ಅಂದರೆ ತುಂಬಾ ಇಷ್ಟ. ಇದ್ದರೆ ಅವರ ಹಾಗೆ ಇರಬೇಕು. ನಾನು ಆ ರೀತಿ ಇರುತ್ತೀನಿ ಎಂದು ಧನುಷ್ ಡಿಕೆಡಿ ವೇದಿಕೆಯಲ್ಲಿ ಮಾತನಾಡಿದ್ದರು.

Share This Article