ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್‌ ಕೊಟ್ಟಿಲ್ಲ: ಟಿಜೆ ಅಬ್ರಹಾಂ

Public TV
1 Min Read
siddaramaiah t.j.abraham

– ರಾಜ್ಯಪಾಲರ ಭೇಟಿಯಾಗಿ ಸ್ಪಷ್ಟೀಕರಣ

ಬೆಂಗಳೂರು: ನನಗೆ ತಿಳಿದ ಮಟ್ಟಿಗೆ ರಾಜ್ಯಪಾಲರು ಸಿಎಂಗೆ ಎರಡನೇ ಶೋಕಾಸ್‌ ನೋಟಿಸ್‌ ಕೊಟ್ಟಿಲ್ಲ ಎಂದು ದೂರುದಾರ ಟಿ.ಜೆ.ಅಬ್ರಹಾಂ (T.J.Abraham) ತಿಳಿಸಿದರು.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅವರು, ನನ್ನ ಪ್ರಾಸಿಕ್ಯೂಷನ್ ಬೇಡಿಕೆ ಏನಿತ್ತೋ ಅದರ ಮೇರೆಗೆ ಸರ್ಕಾರಕ್ಕೆ ಶೋಕಾಸ್ ನೋಟಿಸ್ ಕೊಟ್ಟಿದ್ದರು. ನನ್ನ ಅರ್ಜಿಯಲ್ಲಿ ಒಂದೂ ತಪ್ಪು ಹೇಳದೆ ಕ್ಯಾಬಿನೆಟ್ ನಡೆಸಿ ತಮ್ಮ ತಪ್ಪಿಲ್ಲ. ರಾಜ್ಯಪಾಲರು ನೋಟಿಸ್ ಕೊಟ್ಟಿರೋದೇ ತಪ್ಪು ಅಂತಾ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಅಬ್ರಹಾಂ ಸರಿಯಿಲ್ಲ ಅಂತಲೂ ಆಪಾದನೆ ಮಾಡಿದೆ ಸರ್ಕಾರ. ನಾನು ಹೇಳಿರೋದು ಸರಿ ಇದೆ, ನಾನು ಸರಿ ಇಲ್ಲ. ಈ ಬಗ್ಗೆ ರಾಜ್ಯಪಾಲರಿಗೆ ಸ್ಪಷ್ಟನೆ ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಪ್ರತಿದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡ್ಲೇಬೇಕು: ಭಾಸ್ಕರ್ ರಾವ್ ಬೇಸರ

Thawar Chand Gehlot

ಸರ್ಕಾರ ನನ್ನ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡ್ತಾರೆ ಎಂಬುದು ನನ್ನ ವಿಶ್ವಾಸ. ಸಾಕಷ್ಟು ವಿವರಣೆ ಕೊಟ್ಟಿದ್ದೇನೆ. ಆದಷ್ಟು ಶೀಘ್ರದಲ್ಲಿ ರಾಜ್ಯಪಾಲರು ಉತ್ತರ ಕೊಡ್ತಾರೆ ಎಂದು ಹೇಳಿದರು.

ಇವತ್ತು ಹೆಚ್ಚುವರಿ ದಾಖಲೆ ಕೊಡಲಿಲ್ಲ. ನನ್ನ ಮೇಲೆ ಸರ್ಕಾರ ಮಾಡಿರುವ ಆಪಾದನೆಗೆ ರಾಜ್ಯಪಾಲರ ಬಳಿ ಸ್ಪಷ್ಟೀಕರಣ ಕೊಟ್ಟಿದ್ದೇನೆ. ರಾಜ್ಯಪಾಲರು ಎರಡನೇ ಶೋಕಾಸ್ ನೋಟಿಸ್ ಕೊಟ್ಟಿಲ್ಲ.‌ ನನಗೆ ತಿಳಿದ ಮಟ್ಟಿಗೆ ಎರಡನೇ ನೋಟಿಸ್ ಕೊಟ್ಟಿಲ್ಲ.‌ ರಾಜ್ಯಪಾಲರು ಸ್ಪಷ್ಟನೆ ಕೇಳ್ತಾರೆ ಅಂದ್ರೆ ಅವರಿಗೆ ಇದನ್ನು ಮುಂದುವರೆಸಲು ಆಸಕ್ತಿ ಇದೆ ಅಂತರ್ಥ ಎಂದು ಮಾತನಾಡಿದರು. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸರ್ಕಾರಿಂದ ಗುಡ್ ನ್ಯೂಸ್!

ಕಳೆದ ಗುರುವಾರ ರಾಜ್ಯಪಾಲರ ಸಮಯ ಕೇಳಿದ್ದೆ. ಇವತ್ತು ಬರಲು ಹೇಳಿದ್ರು, ಬಂದು ಸ್ಪಷ್ಟೀಕರಣ ಕೊಟ್ಟಿದ್ದೇನೆ. ನನ್ನ ವಿರುದ್ಧ ಯಾವ ದೂರೂ ಇಲ್ಲ. ಸರ್ಕಾರಕ್ಕೆ ನಾನು ನೇರ ಸವಾಲ್ ಹಾಕ್ತೇನೆ. ನನ್ನ ವಿರುದ್ಧ ಕೇಸ್ ಹುಡುಕಿ. ಹುಡುಕಲು ಆಗದಿದ್ರೆ ಹೇಗೆ ಹುಡುಕಬೇಕು ಅಂತಾ ನನ್ನ ಕೇಳಿ ಎಂದು ಟಾಂಗ್‌ ಕೊಟ್ಟರು.

Share This Article