‘ಓಂ ಶಾಂತಿ ಓಂ’ ಖ್ಯಾತಿಯ ವಿಲನ್ ಅರ್ಜುನ್ ರಾಂಪಾಲ್ (Arjun Rampal) ಇದೀಗ ಸಂದರ್ಶನವೊಂದರಲ್ಲಿ ಲವ್, ಮ್ಯಾರೇಜ್, ಲಿವ್ ಇನ್ ರಿಲೇಷನ್‌ಶಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ, ಅಕ್ರಮ ಸಂಬಂಧ ಕೆಲವರಿಗೆ ಚಟ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಜಾನ್ವಿ ಕಪೂರ್‌ಗೆ ಮತ್ತೆ ಸೋಲು- ಬಾಕ್ಸಾಫೀಸ್‌ನಲ್ಲಿ ‘ಉಲಾಜ್’ ಕಳಪೆ ಕಲೆಕ್ಷನ್
ನಾನು ಸೆಕ್ಸ್ ಅನ್ನು ಪ್ರೀತಿಸುತ್ತೇನೆ. ಲೈಂಗಿಕತೆಯು ಜೀವನದ ಪ್ರಮುಖ ಭಾಗವಾಗಿದೆ. ಒಬ್ಬ ಸಂಗಾತಿಯೊಂದಿಗೆ ಇರುವುದು ತುಂಬಾ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಮ್ಮ ಸಂಗಾತಿಯ ಜೊತೆ ಹಾಸಿಗೆ ಹಂಚಿಕೊಳ್ಳುವಾಗ ಅಲ್ಲೇನೋ ಒಂದು ರೀತಿಯ ಶಕ್ತಿ ಅಡಗಿದೆ ಎಂದು ಅರ್ಜುನ್ ರಾಂಪಾಲ್ ಹೇಳಿದ್ದಾರೆ. ಲೈಂಗಿಕ ಕ್ರಿಯೆಯಲ್ಲಿ ದೊಡ್ಡ ಶಕ್ತಿ ವಿನಿಮಯವಾಗುತ್ತದೆ. ಆ ಕ್ಷಣಕ್ಕೆ ಅದು ನಮಗೆ ಗೊತ್ತಿರಲ್ಲ. ಆದರೆ ಆಗ ನಮ್ಮ ಡಿಎನ್‌ಎ ಎಲ್ಲೋ ಹೋಗಿರುತ್ತದೆ. ಆದರಿಂದ ಲೈಂಗಿಕತೆ ಅವಶ್ಯವಾಗಿ ಬೇಕು ಎಂದು ಕೂಡ ಹೇಳಿದ್ದಾರೆ.
ಇದೇ ವೇಳೆ, ಅಕ್ರಮ ಸಂಬಂಧದ ಬಗ್ಗೆ ನಟ ಮಾತನಾಡಿ, ಮದುವೆಯಾದರೂ ಬೇರೆ ಅವರೊಂದಿಗೆ ಸಂಬಂಧಕ್ಕೆ ಕೆಲವರು ಹಾತೊರೆಯುತ್ತಾರೆ ಅಂದರೆ ಅದು ಅವರ ಚಟ ಎಂದಿದ್ದಾರೆ. ಇದು ಒಂದು ಚಟ, ಇದು ಜನರು ತಮ್ಮ ಇಷ್ಟಕ್ಕೆ ರಚಿಸಿಕೊಂಡಿರುವ ಅಭ್ಯಾಸವಾಗಿದೆ. ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದಿದ್ದಾರೆ. ಅದು ಹೇಗೆ ಅವರದ್ದು ಸುಖಿ ದಾಂಪತ್ಯವಾಗುತ್ತೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ವಿವಾಹೇತರ ಸಂಬಂಧ ಚಟವಾದರೂ ಅದು ಯಾವತ್ತು ಒಳ್ಳೆಯದಲ್ಲ ಎಂದು ಮಾತನಾಡಿದ್ದಾರೆ.
ಅಂದಹಾಗೆ, ‘ಪ್ಯಾರ್ ಇಷ್ಕ್ ಮೊಹಬ್ಬತ್’ ಸಿನಿಮಾದ ಮೂಲಕ ಅರ್ಜುನ್ ರಾಂಪಾಲ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ದಿವಾನಾಪನ್, ಆಂಖೆ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕಳೆದ ವರ್ಷ ತೆಲುಗಿನ ‘ಭಗವಂತ ಕೇಸರಿ’ (Bhagavanth Kesari) ಸಿನಿಮಾದಲ್ಲಿ ಬಾಲಯ್ಯ ಮುಂದೆ ವಿಲನ್ ಆಗಿ ಅರ್ಜುನ್ ರಾಂಪಾಲ್ ಅಬ್ಬರಿಸಿದ್ದರು.