ಬೆಂಗಳೂರು: ಇಂದಿನಿಂದ ರಾಜ್ಯ ರಾಜಕೀಯ ಇನ್ನಷ್ಟು ಕಾವೇರಲಿದೆ. ಮುಡಾ ಹಗರಣದಲ್ಲಿ (MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ತಲೆದಂಡಕ್ಕೆ ಆಗ್ರಹಿಸಿ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಜಂಟಿಯಾಗಿ ಮೈಸೂರು ಚಲೋ (Mysuru Chalo) ಪಾದಯಾತ್ರೆ ಹಮ್ಮಿಕೊಂಡಿದೆ. ಇಂದು ಬೆಳಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy), ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ (Yediyurappa) ಜಂಟಿಯಾಗಿ ಕೆಂಗೇರಿಯ ಕೆಂಪಮ್ಮ ದೇವಾಲಯದಲ್ಲಿ ಚಾಲನೆ ನೀಡಲಿದ್ದಾರೆ.
ಎಂಟು ದಿನದಲ್ಲಿ 124 ಕಿಲೋಮೀಟರ್ ಪಾದಯಾತ್ರೆ ನಡೆಸಲು ಯೋಜನೆ ರೂಪಿಸಲಾಗಿದೆ. ಪಾದಯಾತ್ರೆಗೆ ಜೆಡಿಎಸ್ ಯಾವುದೇ ಷರತ್ತು ಹಾಕಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಈ ಪಾದಯಾತ್ರೆಗೆ ಸರ್ಕಾರ ಕೂಡ ಅನುಮತಿ ನೀಡಿದೆ. ಇದನ್ನೂ ಓದಿ: ಯಾದಗಿರಿ ಶಾಸಕರಿಂದ ಪೋಸ್ಟಿಂಗ್‌ಗೆ 30 ಲಕ್ಷ ರೂ ಬೇಡಿಕೆ? – ಪಿಎಸ್‌ಐ ಸಾವಿನ ಸುತ್ತ ಅನುಮಾನದ ಹುತ್ತ
ಮೈತ್ರಿ ಪಾದಯಾತ್ರೆಯ ಹಾದಿ
* ಆ.3 – ಕೆಂಗೇರಿಯಲ್ಲಿ ಆರಂಭ. ಬಿಡದಿಯಲ್ಲಿ ವಾಸ್ತವ್ಯ
* ಆ.4 – ಬಿಡದಿಯಲ್ಲಿ ಆರಂಭ. ಕೆಂಗಲ್‌ನಲ್ಲಿ ವಾಸ್ತವ್ಯ
* ಆ.5 – ಕೆಂಗಲ್‌ನಲ್ಲಿ ಆರಂಭ. ನಿಡಘಟ್ಟದಲ್ಲಿ ವಾಸ್ತವ್ಯ
* ಆ.6 – ನಿಡಘಟ್ಟದಲ್ಲಿ ಆರಂಭ. ಮಂಡ್ಯದಲ್ಲಿ ವಾಸ್ತವ್ಯ
* ಆ.7 – ಮಂಡ್ಯದಲ್ಲಿ ಆರಂಭ. ತೂಬಿನಕೆರೆಯಲ್ಲಿ ವಾಸ್ತವ್ಯ
* ಆ.8 – ತೂಬಿನಕೆರೆಯಲ್ಲಿ ಆರಂಭ. ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯ
* ಆ.9 – ಶ್ರೀರಂಗಪಟ್ಟಣದಲ್ಲಿ ಆರಂಭ. ಮೈಸೂರು ಹೊರವಲಯದಲ್ಲಿ ವಾಸ್ತವ್ಯ
* ಆ.10 – ಮೈಸೂರು ಹೊರವಲಯದಲ್ಲಿ ಆರಂಭ. ವೇದಿಕೆಯಲ್ಲಿ ಅಂತ್ಯ ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್