ರಾಜಾರೋಷವಾಗಿ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟಿ ಕದ್ದೊಯ್ದ ಕಳ್ಳರು

Public TV
1 Min Read
FotoJet 2

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರಿಗೆ ಪೊಲೀಸರ ಭಯ ಇದ್ದಂಗೆ ಕಾಣ್ತಿಲ್ಲ. ಸಿಸಿಟಿವಿಯಲ್ಲಿ ಸೆರೆಯಾಗ್ತೀವಿ ಅನ್ನುವ ಭಯ ಕೂಡ ಇಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗೆ ಸರ್ಜಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ ಸ್ಕೂಟಿ ಕದ್ದ (Theft) ಮೂವರು ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ:ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ: ಡಿವಿಎಸ್‌

FotoJet 1ಸರ್ಜಾಪುರದ (Sarjapura) ಸಂಪುರ ಗೇಟ್ ಬಳಿ ಮನೆ ಮಂದೆ ನಿಲ್ಲಿಸಿದ ಸ್ಕೂಟಿಯನ್ನ ಮೂವರು ಕಳ್ಳರು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ. ಬಳಿಕ ಆರಾಮಾಗಿ ಸ್ಕೂಟರ್ ಅನ್ನು ಸಂಪುರ ಗೇಟ್‌ನಿಂದ ದೊಮ್ಮಸಂದ್ರದ ಕಡೆಗೆ ತಳ್ಳಿಕೊಂಡೆ ಹೋಗಿರುವ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಕಳ್ಳತನದ ಎರಡು ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೊಮ್ಮಸಂದ್ರದ ಕಡೆ ತಳ್ಳಿಕೊಂಡು ಹೋಗುವ ದೃಶ್ಯ ಮತ್ತು ಇನ್ನೊಂದು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿದ ದೃಶ್ಯವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಲಾಗಿದೆ. ಈ ಹಿನ್ನೆಲೆ ಕಳ್ಳತನ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಖದೀಮರಿಗಾಗಿ ಹುಡುಕಾಟ ಮುಂದುವರೆದಿದೆ.

Share This Article