ನ್ಯಾಯಾಂಗ ಬಂಧನ ಇಂದು ಅಂತ್ಯ- ಮತ್ತೆ ದರ್ಶನ್‌ ಜೈಲಿಗೆ ಕಳುಹಿಸಲು ರಿಮ್ಯಾಂಡ್‌ ಕಾಪಿ ಸಿದ್ಧತೆ

Public TV
2 Min Read
Darshan 14

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ಆರೋಪಿಗಳಾದ ದರ್ಶನ್ ಅಂಡ್ ಗ್ಯಾಂಗ್‌ನ (Darshan And Gang) ನ್ಯಾಯಾಂಗ ಬಂಧನದ ಕಸ್ಟಡಿ ಇಂದಿಗೆ (ಗುರುವಾರ) ಅಂತ್ಯವಾಗಲಿದೆ.

ಗುರುವಾರ (ಆ.1) ಪ್ರಕರಣದ ಎಲ್ಲಾ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಲಿದ್ದು SIT ಪೊಲೀಸರು (Kamakshipalya Police), ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್‌ಗೆ (Karnataka Highcourt) ಮನವಿ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

Maagsitrate Court rejects actor Darshans plea for access to home food in prison

ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಆರೋಪಿಗಳು, ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲು ಸಿದ್ಧತೆ ನಡೆದಿದೆ. ರೇಣುಕಾಸ್ವಾಮಿ ಕೊಲೆ ಸಂಬಂಧ ನಟ ದರ್ಶನ್, ಪವಿತ್ರಾಗೌಡ, ಪವನ್, ಪ್ರದೂಷ್, ವಿನಯ್, ದೀಪಕ್ ಸೇರಿ 17 ಮಂದಿ ಅರೆಸ್ಟ್ ಆಗಿದ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪುನಃ ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಮಾಡಲು ರಿಮ್ಯಾಂಡ್‌ ಅರ್ಜಿಯನ್ನೂ ತಯಾರು ಮಾಡಿಕೊಂಡಿದ್ದಾರೆ.

darshan jail

ನ್ಯಾಯಾಂಗ ಬಂಧನ ವಿಸ್ತರಣೆಗೆ 10ಕ್ಕೂ ಹೆಚ್ಚು ಅಂಶಗಳ ರಿಮ್ಯಾಂಡ್ ಅಪ್ಲಿಕೇಷನ್ ತಯಾರಿ ಮಾಡಲಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಕೋರ್ಟ್‌ಗೆ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಕೆ‌ಮಾಡಲಿದ್ದಾರೆ.

ರಿಮ್ಯಾಂಡ್ ಅರ್ಜಿಯ ಪ್ರಮುಖ ಅಂಶಗಳೇನು?

1) ಪ್ರಕರಣದ ಎ1 ರಿಂದ ಎ17 ಆರೋಪಿಗಳು ಅಪಹರಣ, ಕೊಲೆ, ಒಳ ಸಂಚು, ಮತ್ತು ಸಾಕ್ಷಿನಾಶದಲ್ಲಿ ಭಾಗಿ.
2) ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನಗಳು ಬೇರೆಯವರ ಹೆಸರಿನಲ್ಲಿದ್ದು, ಮಾಲೀಕರನ್ನ ಪತ್ತೆ ಮಾಡಿ ಹೇಳಿಕೆ ದಾಖಲಿಸುವುದು.
3) ಆರೋಪಿಗಳು ಭೌತಿಕ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನ ನಾಶಪಡಿಸಿರುವುದು ತನಿಖೆಯಲ್ಲಿ ಪತ್ತೆ.
4) ಆರೋಪಿಗಳು ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿ, ಸಿಮ್ ನೊಂದಣೆಯಾದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ವಿಚಾರಣೆ.
5) ತನಿಖಾ ಕಾಲದಲ್ಲಿ ಸಿಕ್ಕ ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನ ತಜ್ಞರ ಪರಿಶೀಲನೆಗೆ ಕಳುಹಿಸಿದ್ದು, ವರದಿ ಸಂಗ್ರಹಿಸುವುದು.
6) ಮೊಬೈಲ್ ಹಾಗೂ ಸಾಕ್ಷಿಗಳ ಮೊಬೈಲ್ ಫೋನ್‌ ಹೈದರಾಬಾದ್ ಸಿಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರದಿಯನ್ನು ಪಡೆದುಕೊಳ್ಳುವುದು.
7) ಡಿವಿಆರ್‌ನಲ್ಲಿನ ದತ್ತಾಂಶವನ್ನು ಸಂಗ್ರಹಿಸಿದ ನಂತರ ಪರಿಶೀಲನೆ, ಎಫ್ಎಸ್ಎಲ್‌ಗೆ ಕಳುಹಿಸಿ ವರದಿಯನ್ನ ಪಡೆಯುವುದು.
8) ಪ್ರಕರಣದ ವೇಳೆ ಆರೋಪಿಗಳು ಸಂಪರ್ಕಿಸಿದ ಹಲವು ಸಾಕ್ಷಿದಾರರನ್ನ ವಿಚಾರಣೆ ಮಾಡಿ ಹೇಳಿಕೆ ಪಡೆಯುವುದು.
9) ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿದಾರರನ್ನ ವಿಚಾರಣೆ ಮಾಡಿ ಹೇಳಿಕೆಗಳನ್ನು ಹಾಗೂ CrPC ಸೆಕ್ಷನ್‌ 164 ಅಡಿ ಹೇಳಿಕೆಗಳನ್ನು ಪಡೆದುಕೊಳ್ಳವುದು.
10) ಪ್ರಕರಣದ ಸಾಕ್ಷಿದಾರರನ್ನ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯನ್ನು ಸಾಕ್ಷ್ಯನಾಶ ಪಡಿಸುವ ಸಾಧ್ಯತೆ

Share This Article