– ರಸ್ತೆಯಲ್ಲಿ ಸಿಲುಕಿದ ನೂರಾರು ವಾಹನಗಳು
ಹಾಸನ: ಜಿಲ್ಲೆಯಲ್ಲಿ ಭಾರೀ ಮಳೆಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದ (Landslide) ಪರಿಣಾಮ ಶಿರಾಡಿ ಘಾಟ್ (Shiradi Ghat) ಮತ್ತೆ ಬಂದ್ ಆಗಿದೆ.
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಶಿರಾಡಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಸಕಲೇಶಪುರ (Sakleshpur) ತಾಲೂಕಿನ ದೊಡ್ಡತಪ್ಲು ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿದೆ. ಇದನ್ನೂ ಓದಿ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು
ಗುಡ್ಡ ಕುಸಿತದ ರಭಸಕ್ಕೆ ಬೃಹತ್ ಗಾತ್ರದ ಕಂಟೇನರ್ (Container) ಒಂದು ಪಲ್ಟಿಯಾಗಿದೆ. ಇದರೊಂದಿಗೆ ಇತರೆ ವಾಹನಗಳು ಕೂಡ ಸಿಲುಕಿಕೊಂಡಿವೆ. ಪಲ್ಟಿಯಾದ ಕಂಟೇನರ್ ಜೊತೆಗೆ ಚಾಲಕ ಕೂಡ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರದಲ್ಲಿ ನಾನೇ ನ್ಯಾಯಕ್ಕಾಗಿ ಬೇಡುವ ಪರಿಸ್ಥಿತಿ ಬಂದಿದೆ: ನೇಹಾ ಪ್ರಕರಣದಲ್ಲಿ ತಂದೆ ಅಸಮಾಧಾನ
ಇಂದು ಬೆಳಗ್ಗೆ ಇದೇ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿದ್ದರು. ಸಂಜೆ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಇದರಿಂದಾಗಿ ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರ ಬಂದ್ ಆಗಿದೆ. ಇದನ್ನೂ ಓದಿ: ಸರ್ಕಾರಿ ಕಾಲೇಜುಗಳಲ್ಲಿ ಓದುವ ಪಿಯುಸಿ ಮಕ್ಕಳಿಗೆ ಉಚಿತ ನೀಟ್ ತರಬೇತಿ: ಮಧು ಬಂಗಾರಪ್ಪ