ಅರೇಬಿಕ್ ಭಾಷೆಗೆ ಡಬ್ ಆಯ್ತು ರಾಜ್ ಬಿ ಶೆಟ್ಟಿ ನಟನೆಯ ಸಿನಿಮಾ

Public TV
1 Min Read
raj b shetty 2

‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ (Raj B Shetty) ಇತ್ತೀಚೆಗೆ ‘ರೂಪಾಂತರ’ ಎಂಬ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಇದರ ನಡುವೆ ಅವರು ನಟಿಸಿದ ಸಿನಿಮಾ ಒಂದು ಅರೇಬಿಕ್ ಭಾಷೆಗೆ ಡಬ್ ಆಗಿ ರಿಲೀಸ್‌ಗೆ ಸಿದ್ಧವಾಗಿದೆ.

raj b shettyರಾಜ್ ಬಿ ಶೆಟ್ಟಿ ಅವರು ಇತ್ತೀಚೆಗೆ ಮಮ್ಮುಟ್ಟಿಗೆ ವಿಲನ್ ಆಗಿ ‘ಟರ್ಬೋ’ (Turbo Film) ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ನಟನೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೆಟ್ರಿವೇಲ್ ಷಣ್ಮುಖಂ ಎಂಬ ಹೆಸರಿನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಗಮನ ಸೆಳೆದಿದ್ದರು. ಈಗ ಇದೇ ಚಿತ್ರ ಅರೇಬಿಕ್ ಭಾಷೆಗೆ ಡಬ್ ಆಗಿ ಸದ್ಯದಲ್ಲೇ ರಿಲೀಸ್ ಆಗಲಿದೆ.

raj b shetty 3

ಗಲ್ಫ್ ರಾಷ್ಟ್ರದಲ್ಲಿ ‘ಟರ್ಬೋ’ ಚಿತ್ರ ರಿಲೀಸ್ ಆಗುತ್ತಿದೆ. ಇದು ಅರೇಬಿಕ್ ಭಾಷೆಗೆ ಡಬ್ ಆದ ಮೊದಲ ಭಾರತೀಯ ಸಿನಿಮಾ ಅನ್ನೋದು ವಿಶೇಷ. ಇದನ್ನೂ ಓದಿ:ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

ಅಂದಹಾಗೆ, ರಾಜ್ ಬಿ ಶೆಟ್ಟಿ ಸದ್ಯ ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಕಿರುತೆರೆ ನಟಿ ಕೌಸ್ತುಭ ಮಣಿ ನಟಿಸಿದ್ದಾರೆ.

Share This Article