ಸ್ಯಾಂಡಲ್‌ವುಡ್‌ನಲ್ಲಿ ನಾಯಕ ನಟನಾಗಿ ಮಿಂಚುತ್ತಿರುವ ‘ಬಿಗ್ ಬಾಸ್’ (Bigg Boss) ಖ್ಯಾತಿಯ ಚಂದನ್ ಶೆಟ್ಟಿ (Chandan Shetty) ಇದೀಗ ‘ಜೇಮ್ಸ್’ (James) ನಿರ್ದೇಶಕ ಚೇತನ್ ಕುಮಾರ್ ಜೊತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ನಮ್ಮದು, ನಿರ್ಮಾಪಕರದ್ದು ಒಪ್ಪಂದಗಳು ಕಾನೂನಾತ್ಮಕವಾಗಿದೆ- 50 ಲಕ್ಷ ಕಮಿಷನ್ ಆರೋಪಕ್ಕೆ ಎಪಿ ಅರ್ಜುನ್ ಸ್ಪಷ್ಟನೆ

ಅಂದಹಾಗೆ, ಚೇತನ್ ಕುಮಾರ್ ಸದ್ಯ ‘ಗಟ್ಟಿಮೇಳ’ (Gattimela) ನಟ ರಕ್ಷ್‌ಗೆ ನಿರ್ದೇಶನ ಮಾಡಿದ್ದಾರೆ. ಇತ್ತ ಚಂದನ್ ಶೆಟ್ಟಿ ನಾಯಕನಾಗಿ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ತಿದ್ದಾರೆ. ನಿವೇದಿತಾ ಗೌಡ ಜೊತೆಗಿನ ‘ಕ್ಯಾಂಡಿ ಕ್ರಶ್’ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿವೆ.

