ಬೆಂಗಳೂರು: ಮುಡಾ ಮತ್ತು ವಾಲ್ಮೀಕಿ ನಿಗಮ (MUDA And Valmiki Scam) ಅಕ್ರಮಗಳ ವಿರುದ್ಧ ದೋಸ್ತಿಗಳ ಪಾದಯಾತ್ರೆಗೆ ಅಖಾಡ ಸಜ್ಜಾಗಿದೆ. ಪಾದಯಾತ್ರೆಯ ರೂಟ್‌ಮ್ಯಾಪ್ ಮತ್ತು ಸಿದ್ಧತೆ ಕುರಿತು ಸೋಮವಾರ ಬಿಜೆಪಿ ನಾಯಕರು (BJP Leader) ಪೂರ್ವಭಾವಿ ಸಭೆ ನಡೆಸಿದರು.
ಸಭೆ ಬಳಿಕ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra), ಆಗಸ್ಟ್ 3ರ ಶನಿವಾರ ಬೆಳಗ್ಗೆ 8.30ಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಹೆಚ್‌ಡಿಕೆ, ಪ್ರಹ್ಲಾದ್ ಜೋಶಿಯವರಿಂದ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಈವೇಳೆ ಬಿಜೆಪಿ ಜೆಡಿಎಸ್‌ನ ಎಲ್ಲ ಹಿರಿಯರು ಉಪಸ್ಥಿತರಿರಲಿದ್ದಾರೆ. ಕೆಂಗೇರಿ ಬಳಿಯ ಕೆಂಪಮ್ಮ ದೇಗುಲ, ಗಣಪತಿ ದೇಗುಲದಲ್ಲಿ ಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತೇವೆ. ಆಗಸ್ಟ್ 10ರ ಶನಿವಾರ ಪಾದಯಾತ್ರೆಯ ಸಮಾರೋಪ ಇದ್ದು, ನಮ್ಮ ವರಿಷ್ಠರು ಪಾಲ್ಗೊಳ್ತಾರೆ ಅಂತ ತಿಳಿಸಿದರು. ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ಎಷ್ಟು ಸೈಟು ಬರೆಸಿಕೊಂಡಿದ್ದಾರೆ ಪಟ್ಟಿ ಕೊಡ್ಲಾ? – ಸಿದ್ದರಾಮಯ್ಯ
ಇನ್ನೂ ಒಟ್ಟು ಏಳು ದಿನಗಳ ಕಾಲ ಪಾದಯಾತ್ರೆ (Mysuru Chalo Padayatra) ನಡೆಯಲಿದ್ದು, ನಿತ್ಯ 20 ನಡಿಗೆ ಇರಲಿದೆ. ಬೆಳಗ್ಗೆ 10 ಕಿಮೀ, ಊಟದ ನಂತರ 10 ಕಿಮೀ ಪಾದಯಾತ್ರೆ. 224 ವಿಧಾನಸಭೆ ಕ್ಷೇತ್ರಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಿತ್ಯ 8-10 ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಾದಯಾತ್ರೆಗೆ ಪಕ್ಷದಿಂದ ಪ್ರಮುಖರ ತಂಡ ರಚಿಸಲಾಗಿದೆ. ಪ್ರತೀ ಜಿಲ್ಲೆಯಿಂದ ಕನಿಷ್ಠ 200 ಜನ ಬರ್ತಾರೆ, ಏಳು ದಿನವೂ ಅವರು ಇರ್ತಾರೆ. ವಸತಿ ವ್ಯವಸ್ಥೆ, ಊಟೋಪಹಾರಕ್ಕೆ ತಂಡಗಳನ್ನು ರಚಿಸಲಾಗಿದೆ. ಈ ಪಾದಯಾತ್ರೆ ಯಶಸ್ವಿಗೊಳಿಸಲು ಬಿಜೆಪಿ ಜೆಡಿಎಸ್ ಮುಖಂಡರ ಸಮನ್ವಯ ತಂಡವನ್ನೂ ರಚಿಸ್ತೇವೆ ಅಂತ ಇದೇ ವೇಳೆ ವಿಜಯೇಂದ್ರ ತಿಳಿಸಿದರು.
ಇನ್ನೂ ಪಾದಯಾತ್ರೆಗೆ ಸರ್ಕಾರ ಅಧಿಕೃತ ಅನುಮತಿ ಕೊಡದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ವಿಜಯೇಂದ್ರ, ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಸಹ ಪಾದಯಾತ್ರೆ ಮಾಡಿತ್ತು. ನಮ್ಮ ಹೋರಾಟ ಹತ್ತಿಕ್ಕುವ ಶಕ್ತಿ, ಈ ಸರ್ಕಾರಕ್ಕೆ ಇಲ್ಲ. ಸರ್ಕಾರದ ವಿರುದ್ಧ ಜನ ಆಕ್ರೋಶ ಕಾರ್ತಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕಿದರೆ ಪರಿಸ್ಥಿತಿ ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಮಧ್ಯಸ್ಥಿಕೆ ವಹಿಸಲಿ, ಮೇಕೆದಾಟು ಅಣೆಕಟ್ಟು ಕಟ್ಟಲು ಸಿದ್ಧ – ಸಿದ್ದರಾಮಯ್ಯ
ಕಾಟಾಚಾರಕ್ಕೆ ಹೋರಾಡ್ತಿಲ್ಲ:
ಇದೇ ವೇಳೆ ವಿಜಯೇಂದ್ರ ನಾಯಕತ್ವ ಒಪ್ಪಿಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ. ನಾನು ನಾಯಕ ಅಲ್ಲ, ಪಕ್ಷದ ಕಾರ್ಯಕರ್ತ, ನಾನೊಬ್ಬನೇ ನಾಯಕ ಅಂತ ಅನ್ಕೊಂಡಿಲ್ಲ. ಹೈಕಮಾಂಡ್ ಏನು ಹೇಳುತ್ತೋ ಆ ಕೆಲಸ ಶ್ರದ್ಧೆಯಿಂದ ಮಾಡಿಕೊಂಡು ಹೋಗ್ತಿದ್ದೇನೆ ಎಂದಿದ್ದಾರೆ. ಇನ್ನೂ ಬಸನಗೌಡ ಪಾಟೀಲ್ ಯತ್ನಾಳ್‌ರಿಂದ ಪ್ರತ್ಯೇಕ ಪಾದಯಾತ್ರೆ ಬಗ್ಗೆ ಮಾತಾಡಿ, ಒಂದು ವೇಳೆ ಒಂದಿಬ್ಬರು ಪ್ರತ್ಯೇಕ ಪಾದಯಾತ್ರೆ ಮಾಡಿದ್ರೆ. ಅದು ನಮ್ಮ ಪಕ್ಷಕ್ಕೆ ಶಕ್ತಿ ಕೊಡುತ್ತದೆ ಎಂದಿದ್ದಾರೆ.
ಸದನದಲ್ಲಿ ಬಿಜೆಪಿ ಜೆಡಿಎಸ್ ಹೋರಾಟಕ್ಕೆ ಆಕ್ಷೇಪಿಸಿದ ಮಾಜಿ ಸಚಿವ ಅರವಿಂದ ಲಿಂಬಾವಳಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಾವು ಏನು ಕಾಟಾಚಾರದ ಹೋರಾಟ ಮಾಡಿಕೊಂಡು ಬಂದಿಲ್ಲ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಅಭಿಮನ್ಯುವಿಗೆ ಮಾಡಿದಂತೆ ಇಡೀ ಭಾರತಕ್ಕೆ ಚಕ್ರವ್ಯೂಹ ರಚಿಸಿದ್ದಾರೆ, ದೇಶವನ್ನ ಧ್ವಂಸಗೊಳಿಸುತ್ತಾರೆ – ರಾಗಾ ಆತಂಕ