ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 3ರಿಂದ (ಶನಿವಾರ) ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ.
ಮೈಸೂರು ಪಾದಯಾತ್ರೆಯ ರೂಪುರೇಷೆ ಸಂಬಂಧ ಮೈತ್ರಿ ನಾಯಕರು ಭಾನುವಾರ ಜಂಟಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಶನಿವಾರದಂದು ಬೆಂಗಳೂರಿನ (Bengaluru) ನೈಸ್ ರಸ್ತೆಯಿಂದ ಪಾದಯಾತ್ರೆ ಆರಂಭಿಸಲಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಹೆಚ್.ಡಿ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ದಿಢೀರ್ ರಕ್ತಸ್ರಾವವಾಗಲು ಕಾರಣವೇನು? – ಬ್ಲಡ್ ಥಿನ್ನರ್ ಔಷಧಿ ತೆಗೆದುಕೊಳ್ಳುತ್ತಿದ್ದದ್ದು ಏಕೆ?
ಮೈಸೂರಿನಲ್ಲಿ (Mysuru) ಪಾದಯಾತ್ರೆ ಸಮಾರೋಪಕ್ಕೆ ಜೆ.ಪಿ ನಡ್ಡಾ ಅವರನ್ನು ಕರೆಸಲು ದೋಸ್ತಿ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಪಾದಯಾತ್ರೆಯ ಮಾರ್ಗ ಮಧ್ಯೆ ಕೆಲವು ಕಡೆ ಜನ ಸೇರಿಸಿ ಮೈತ್ರಿ ಪಕ್ಷಗಳು ಸಮಾವೇಶ ನಡೆಸಲಿವೆ. ಶನಿವಾರದಿಂದ ಒಂದು ವಾರಗಳ ಕಾಲ ಪಾದಯಾತ್ರೆ ನಡೆಯಲಿದ್ದು, ದಿನಕ್ಕೆ 20 ಕಿಮೀ ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ಸಭೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: Women’s Asia Cup 2024: ಲಂಕಾ ಚಾಂಪಿಯನ್ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು
ಸಭೆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮಾಧ್ಯಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರ ಇದೆ. ಮುಡಾ, ವಾಲ್ಮೀಕಿ ನಿಗಮಗಳಲ್ಲಿ ಹಗರಣ, ಎಸ್ಸಿ-ಎಸ್ಟಿ ಹಣ ದುರ್ಬಳಕೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮುಂದಿನ ಶನಿವಾರ ನಮ್ಮ ಪಾದಯಾತ್ರೆ ಆರಂಭವಾಗಲಿದೆ. ಆಗಸ್ಟ್ 3ರ ಶನಿವಾರದಿಂದ 7 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಆಗಸ್ಟ್ 10ರಂದು ಪಾದಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ ಇರಲಿದೆ. ಅಂದು ರಾಷ್ಟ್ರೀಯ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆಗೆ ಮೂಗಿನಿಂದ ದಿಢೀರ್ ರಕ್ತಸ್ರಾವ – ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ