ಸಮಂತಾ ನಟನೆಯ ಬಾಲಿವುಡ್ ಪ್ರಾಜೆಕ್ಟ್ ಬಗ್ಗೆ ಸಿಕ್ತು ಸಿಹಿಸುದ್ದಿ

Public TV
1 Min Read
samantha

ಸೌತ್ ನಟಿ ಸಮಂತಾ (Samantha) ಬಾಲಿವುಡ್‌ಗೆ (Bollywood) ಲಗ್ಗೆ ಇಟ್ಟಾಗಿದೆ. ವರುಣ್ ಧವನ್ ಜೊತೆಗಿನ ಸ್ಯಾಮ್ ವೆಬ್ ಸಿರೀಸ್ ಬಗ್ಗೆ ಅಪ್‌ಡೇಟ್ ಸಿಗೋದು ಯಾವಾಗ ಎಂಬುದಕ್ಕೆ ತಂಡ ಗುಡ್ ನ್ಯೂಸ್ ಕೊಟ್ಟಿದೆ. ಇದನ್ನೂ ಓದಿ:ಸಮಸ್ಯೆ ಇರೋದು ನನ್ನ ಬಟ್ಟೆಯಲ್ಲಿ ಅಲ್ಲ- ಟ್ರೋಲಿಗರಿಗೆ ಅಮಲಾ ಪೌಲ್ ತಿರುಗೇಟು

samantha 1

ವರುಣ್ ಧವನ್‌ಗೆ (Varun Dhawan) ನಾಯಕಿಯಾಗಿ ‘ಹನಿ ಬನಿ’ ಎಂಬ ವೆಬ್ ಸಿರೀಸ್ ಮೂಲಕ ಬಿಟೌನ್‌ಗೆ ಸಮಂತಾ ಕಾಲಿಟ್ಟಿದ್ದಾರೆ. ಈಗ ಇದರ ಪ್ರಸಾರ ಯಾವಾಗ ಎಂದು ಕಾಯುತ್ತಿದ್ದ ಸ್ಯಾಮ್ ಫ್ಯಾನ್ಸ್‌ಗೆ ತಂಡ ಭರ್ಜರಿ ಅಪ್‌ಡೇಟ್ ಕೊಟ್ಟಿದೆ. ಇದೇ ಆಗಸ್ಟ್ 1ರಂದು ‘ಹನಿ ಬನಿ’ ಟ್ರೈಲರ್ ರಿಲೀಸ್ ಆಗಲಿದೆ. ಅಂದೇ ಇದರ ಪ್ರಸಾರ ದಿನಾಂಕ ಕೂಡ ಘೋಷಣೆ ಆಗಲಿದೆ. ಒಟಿಟಿಯಲ್ಲಿ ಅಬ್ಬರಿಸಲಿದೆ.

samantha 1ಸಮಂತಾರ ಮೊದಲ ಬಾಲಿವುಡ್ ಪ್ರಾಜೆಕ್ಟ್ ಆಗಿರುವ ಕಾರಣ ಈ ಸಿರೀಸ್ ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ. ವರುಣ್ ಮತ್ತು ಸಮಂತಾ ರೊಮ್ಯಾನ್ಸ್ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾಯ್ತಿದ್ದಾರೆ.

ಅಂದಹಾಗೆ, ಇದರ ಇಂಗ್ಲಿಷ್ ವರ್ಷನ್ ‘ಸಿಟಾಡೆಲ್’ ಒಟಿಟಿಯಲ್ಲಿ ಸದ್ದು ಮಾಡಿತ್ತು. ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ನಟಿಸಿ ಸೈ ಎನಿಸಿಕೊಂಡಿದ್ದರು.

Share This Article