ಕೊಲೆ ಪ್ರಕರಣದ ಸಂಬಂಧ ಜೈಲಿನಲ್ಲಿರುವ ದರ್ಶನ್‌ರನ್ನು (Darshan) ಕೊನೆಗೂ ಹಾಸ್ಯ ನಟ ಸಾಧುಕೋಕಿಲ ಭೇಟಿಯಾಗಿದ್ದಾರೆ. ಅವರನ್ನು ನೋಡಿ ಸಮಾಧಾನ ಆಯ್ತು ಎಂದು ದರ್ಶನ್ ಭೇಟಿಯ ಬಗ್ಗೆ ಸಾಧುಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್- ಮತ್ತೆ ಒಂದಾಗ್ತಾರಾ?
ಸಚ್ಚಿದಾನಂದ, ನಿರ್ಮಾಪಕ ರಾಮಮೂರ್ತಿ ಜೊತೆ ಸಾಧುಕೋಕಿಲ ಜೈಲಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸ್ನೇಹಿತರು ನಟ ದರ್ಶನ್ ಅವರನ್ನು ಭೇಟಿ ಮಾಡಿದ್ವಿ, ಜೈಲಿನಲ್ಲಿ ದರ್ಶನ್ ಅವರು ಕೂಲ್ ಆಗಿ ಇದ್ದರು. ಅವರನ್ನು ನೋಡಿ ನಮಗೂ ಸಮಾಧಾನವಾಯ್ತು ಎಂದು ಮಾತನಾಡಿದ್ದಾರೆ. ಸೆಲ್‌ನಲ್ಲಿ ಬುಕ್ಸ್ ಓದಿಕೊಂಡು ಕೂಲ್ ಅಂಡ್ ಕಾಮ್ ಆಗಿ ಇದ್ದಾರೆ. ಅವರನ್ನು ನೋಡಿ ನಮಗೂ ನೆಮ್ಮದಿ ಸಿಕ್ತು ಎಂದಿದ್ದಾರೆ.
ಕಳೆದ ಮಂಗಳವಾರ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. `ಮೆಜೆಸ್ಟಿಕ್’ ಸಿನಿಮಾ ನಿರ್ಮಾಪಕ ರಾಮಮೂರ್ತಿ ಮತ್ತು ಇತರೆ ಸ್ನೇಹಿತರು ಭೇಟಿ ಮಾಡಬೇಕಿತ್ತು. ವಾರಕ್ಕೆ ಎರಡೇ ಎಂಟ್ರಿಗೆ ಅವಕಾಶ ಇರುವ ಹಿನ್ನೆಲೆ ನನಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ದರ್ಶನ್ ಭೇಟಿಯಾಗದೆ ವಾಪಸ್ ಹೋಗಿದ್ದೆ ಎಂದು ಸಾಧುಕೋಕಿಲ ಹೇಳಿದ್ದಾರೆ.
ದರ್ಶನ್ ಮೊದಲನೇ ಸಿನಿಮಾ ‘ಮೆಜೆಸ್ಟಿಕ್’ನಿಂದ ನಾವು ಸ್ನೇಹಿತರು. ದರ್ಶನ್ ಏನೂ ಅಂತ ನನಗೆ ಚೆನ್ನಾಗಿ ಗೊತ್ತು. ಒಬ್ಬ ಬ್ರದರ್ ಆಗಿ ದರ್ಶನ್ ನೋಡೋಕೆ ಬಂದಿದ್ದೇನೆ. ದರ್ಶನ್ ಒಳಗೆ ಆರೋಗ್ಯವಾಗಿದ್ದಾರೆ. ಕಾನೂನು ರೀತಿಯಲ್ಲಿ ನಟ ದರ್ಶನ್‌ಗೆ ಚಿಕಿತ್ಸೆ ಮತ್ತು ಇತರೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಸಾಧುಕೋಕಿಲ ಹೇಳಿದ್ದಾರೆ. ಅಭಿಮಾನಿಗಳು ಶಾಂತರಾಗಿದ್ದರೆ ದರ್ಶನ್ ಮತ್ತಷ್ಟು ಗಟ್ಟಿಯಾಗ್ತಾರೆ ಎಂದು ಸಾಧುಕೋಕಿಲ ಮಾತನಾಡಿದ್ದಾರೆ.