‘ಕಲ್ಕಿ’ಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ- ಅಮಿತಾಭ್, ಪ್ರಭಾಸ್‌ಗೆ ಲೀಗಲ್ ನೋಟಿಸ್

Public TV
2 Min Read
Kalki 3

‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕರಿಗೆ, ನಟರಾದ ಅಮಿತಾಭ್ (Amitabh Bachchan), ಪ್ರಭಾಸ್‌ಗೆ (Prabhas) ಕಲ್ಕಿಧಾಮ ಪೀಠಾಧೀಶ್ವರ ಆಚಾರ್ಯ ಪ್ರಮೋದ್ ಕೃಷ್ಣಂ ಲೀಗಲ್ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ದಿನಕರ್ ತೂಗುದೀಪ್ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

Kalki 2898 ADನಿಮ್ಮ ಚಲನಚಿತ್ರವು ಭಗವಾನ್ ಕಲ್ಕಿಯ ಪರಿಕಲ್ಪನೆಯನ್ನು ಬದಲಾಯಿಸಿರುವಂತೆ ಇದೆ. ಹಿಂದೂ ಪುರಾಣ ಗ್ರಂಥಗಳಲ್ಲಿ ಬರೆದ ಮತ್ತು ವಿವರಿಸಿದ ಕಾರಣಗಳಿಗಾಗಿ, ಭಗವಾನ್ ಕಲ್ಕಿಯ ಕಥೆಯ ಚಿತ್ರಣ ಮತ್ತು ಚಿತ್ರಣವು ಸಂಪೂರ್ಣವಾಗಿ ತಪ್ಪಾಗಿದೆ. ಹಾಗಾಗಿ ಈ ಪವಿತ್ರ ಗ್ರಂಥಗಳಿಗೆ ಅಗೌರವವಾಗಿದೆ. ಕಲ್ಕಿಯ ಕಥೆಯನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ಇದು ಪವಿತ್ರ ಗ್ರಂಥಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಆರೋಪಿಸಿ ಚಿತ್ರತಂಡಕ್ಕೆ ಆಚಾರ್ಯ ಪ್ರಮೋದ್ ಕೃಷ್ಣಂ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಉಜ್ಜವಲ್ ಆನಂದ್ ಶರ್ಮಾ ಅವರು ನೋಟಿಸ್ ನೀಡಿದ್ದಾರೆ.

ಕಲ್ಕಿ ಅವತಾರವು ವಿಷ್ಣುವಿನ ಕೊನೆಯ ಅವತಾರವಾಗಿದೆ. ಪ್ರಧಾನಿ ಮೋದಿ ಅವರು ಫೆಬ್ರವರಿ 19ರಂದು ಯುಪಿಯ ಸಂಭಾಲ್‌ನಲ್ಲಿ ಶ್ರೀ ಕಲ್ಕಿ ಧಾಮ್ ದೇವಾಲಯದ ಉದ್ಘಾಟನೆ ಮಾಡಿದರು. ಅಲ್ಲಿ ಭಗವಾನ್ ಕಲ್ಕಿ ಜನಿಸಲಿದ್ದಾರೆ. ಇಡೀ ಜಗತ್ತು ಅವನಿಗಾಗಿ ಕಾಯುತ್ತಿದೆ. ಆದರೆ ಈ ಚಿತ್ರವು ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಎಂದು ಮಾಜಿ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿಕೆ ನೀಡಿದ್ದಾರೆ.

ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಅಮಿತಾಬ್, ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಅನೇಕರು ನಟಿಸಿದ್ದಾರೆ. 2ಡಿ ಜೊತೆಗೆ 3ಡಿಯಲ್ಲೂ ಸಿನಿಮಾ ವೀಕ್ಷಿಸಲು ಲಭ್ಯವಿದೆ.

Share This Article