ಕೊಲೊಂಬೊ: ಟೀಂ ಇಂಡಿಯಾ (Team India) ಮಹಿಳಾ ತಂಡದ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ (Shreyanka Patil) ಎಡಗೈಗೆ ಗಾಯವಾಗಿದ್ದು, ಮಹಿಳಾ ಏಷ್ಯಾ ಕಪ್ 2024 ನಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾದ (Sri Lanka) ಡಂಬುಲ್ಲಾದಲ್ಲಿರುವ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಮಹಿಳಾ ಏಷ್ಯಾ ಕಪ್ 2024 ರ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು, ಯುಎಇ ತಂಡದೊಂದಿಗೆ ಸೆಣಸಲಿದ್ದಾರೆ. ಇದನ್ನೂ ಓದಿ: IPL 2025: ಮರಳಿ ಆರ್‌ಸಿಬಿಗೆ ರಾಹುಲ್? – ಡೆಲ್ಲಿ ತೊರೆದು ಸಿಎಸ್‌ಕೆ ಸೇರಲಿದ್ದಾರೆ ರಿಷಭ್ ಪಂತ್?
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶನಿವಾರ ಪತ್ರಿಕಾ ಪ್ರಕಟಣೆಯಲ್ಲಿ, ಶ್ರೇಯಾಂಕಾ ಎಡಗೈಯ ನಾಲ್ಕನೇ ಬೆರಳಿಗೆ ಗಾಯವಾಗಿದೆ ಎಂದು ತಿಳಿಸಿದೆ. ಶ್ರೇಯಾಂಕಾ ಬದಲಿಗೆ ವುಮೆನ್ ಇನ್ ಬ್ಲೂ ತಂಡದಲ್ಲಿ ತನುಜಾ ಕನ್ವರ್ (21) ಆಡಲಿದ್ದಾರೆ.
ದಂಬುಲ್ಲಾದಲ್ಲಿ ನಡೆದ ಪಾಕಿಸ್ತಾನ ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಶ್ರೇಯಾಂಕಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಯುವ ಆಟಗಾರ್ತಿ ತನ್ನ 3.2 ಓವರ್‌ಗಳಲ್ಲಿ 14 ರನ್‌ಗಳನ್ನು ಬಿಟ್ಟು ಎರಡು ವಿಕೆಟ್ ಕಿತ್ತಿದ್ದರು. ಇದನ್ನೂ ಓದಿ: Women’s Asia Cup 2024: ಸಿಂಹಿಣಿಯರ ಅಬ್ಬರಕ್ಕೆ ಪಾಕ್ ಧೂಳಿಪಟ – ಭಾರತಕ್ಕೆ ಗೆಲುವಿನ ಶುಭಾರಂಭ!