ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ದರ್ಶನ್ (Darshan) ಸದ್ಯ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಕಳೆದ ಒಂದು ತಿಂಗಳಿಂದ ಜೈಲಿನಲ್ಲಿರುವ ನಟ ದರ್ಶನ್, ಶೀಘ್ರದಲ್ಲಿ ಬಿಡುಗಡೆಯಾಗಲಿ ಎಂದು ಮುಡಿಪು ಕಟ್ಟಿ ಫ್ಯಾನ್ಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ
ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ನಟ ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಿದ್ದಾರೆ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಮತ್ತು ಪಂಚಾಕ್ಷರಿ ಗವಾಯಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ ಡಿಬಾಸ್ ಅಭಿಮಾನಿಗಳು.
ನಟ ದರ್ಶನ್ ಫೋಟೋ, ‘ಡೆವಿಲ್’ (Devil Film) ಸಿನಿಮಾದ ಪೋಸ್ಟರ್ ಇಟ್ಟು ಅಭಿಮಾನಿಗಳು ಪೂಜೆ ಮಾಡಿದ್ದಾರೆ. ಈಡುಗಾಯಿ ಒಡೆದು ದರ್ಶನ್ ಶೀಘ್ರದಲ್ಲೇ ಬಿಡುಗಡೆ ಆಗಲಿ ಎಂದು ಫ್ಯಾನ್ಸ್ ಪ್ರಾರ್ಥನೆ ಸಲ್ಲಿಸಿದ್ದಾರೆ.