ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ – ಬಸ್‍ಗಳಲ್ಲಿದ್ದ 6 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ಕಣ್ಮರೆ

Public TV
1 Min Read
6 Indians Missing In Nepal After Landslide Pushes Their Bus Into River

ಕಾಠ್ಮಂಡು: ಮಧ್ಯ ನೇಪಾಳದ (Nepal) ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಭೂಕುಸಿತ (Landslide) ಸಂಭವಿಸಿ 2 ಬಸ್‍ಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದಿವೆ. ಬಸ್‍ನಲ್ಲಿದ್ದ 6 ಭಾರತೀಯರು ಸೇರಿದಂತೆ ಸುಮಾರು 65 ಪ್ರಯಾಣಿಕರು ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‍ಗಳು ನದಿಯಲ್ಲಿ ಮುಳುಗಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ಬೆಳಗಿನ ಜಾವ 3:30 ರ ಸುಮಾರಿಗೆ ಈ ಭೂಕುಸಿತ ಸಂಭವಿಸಿದೆ. ಈ ವೇಳೆ ಎರಡೂ ಬಸ್‍ಗಳು ನದಿಗೆ ಉರುಳಿ ಬಿದ್ದಿವೆ. ಪರಿಣಾಮ ಇಬ್ಬರು ಬಸ್ ಚಾಲಕರು ಸೇರಿದಂತೆ ಒಟ್ಟು 65 ಜನ ಈ ದುರಂತದಲ್ಲಿ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡೂ ಬಸ್‍ಗಳು ಕಠ್ಮಂಡುವಿನಿಂದ ರೌತಹತ್‍ನ ಗೌರ್‍ಗೆ ತೆರಳುತ್ತಿದ್ದವು. ಒಂದು ಬಸ್‍ನಲ್ಲಿ 24 ಜನ ಮತ್ತು ಇನ್ನೊಂದು ಬಸ್‍ನಲ್ಲಿ 41 ಜನ ಪ್ರಯಾಣಿಸುತ್ತಿದ್ದರು. ಘಟನಾ ಸ್ಥಳದಲ್ಲಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದಲ್ಲಿ ತೀವ್ರ ಮಳೆಯಿಂದಾಗಿ ಕಾಠ್ಮಂಡುವಿನಿಂದ (Kathmandu) ಚಿತ್ವಾನ್‍ನ ಭರತ್‍ಪುರಕ್ಕೆ ತೆರಳಲಿರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article