ಬದರಿನಾಥ ದರ್ಶನ ಮುಗಿಸಿ ವಾಪಸ್ಸಾಗ್ತಿದ್ದಾಗ ಭೂಕುಸಿತ – ಸಂಕಷ್ಟಕ್ಕೆ ಸಿಲುಕಿದ 7 ಮಂದಿ ಕನ್ನಡಿಗರು

Public TV
2 Min Read
Haveri kannadigas Chardham badarinath temple

– ತಮ್ಮನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ

ಹಾವೇರಿ: ಬದರಿನಾಥ (Badrinath Temple) ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಭೂಕುಸಿತ (Landslide) ಉಂಟಾದ ಪರಿಣಾಮ 7 ಮಂದಿ ಕನ್ನಡಿಗರು (Kannadigas) ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.

ಹಾವೇರಿ (Haveri) ಜಿಲ್ಲೆ ಚಿಕ್ಕೇರೂರು ಹಾಗೂ ತಿಳವಳ್ಳಿ ಗ್ರಾಮಗಳ 7 ಜನರ ತಂಡವು ಚಾರಧಾಮ್ ಯಾತ್ರೆಗೆ (Char Dham Yatra) ತೆರಳಿತ್ತು. ಬದರಿನಾಥ ದರ್ಶನ ಮುಗಿಸಿ ವಾಪಾಸ್ ಆಗುತ್ತಿದ್ದ ವೇಳೆ ಉತ್ತರಾಖಂಡದ ಚೆಮೋಲಿ ಜಿಲ್ಲೆ ಜ್ಯೋಶಿಮಠ ಎಂಬ ಗ್ರಾಮದ ಬಳಿ ಭೂ ಕುಸಿತವಾಗಿದೆ. ಘಟನೆ ಹಿನ್ನೆಲೆ 7 ಮಂದಿ ಕನ್ನಡಿಗರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದ ಮುರುಘಾ ಮಠದಲ್ಲಿ ಕಳ್ಳರ ಕೈಚಳಕ – ಮುರುಘಾಶ್ರೀ ಬೆಳ್ಳಿ‌ ಪ್ರತಿಮೆ ಕಳ್ಳತನ

Haveri Char Dham Yatra Kannadigas

ಬದರಿನಾಥ ದರ್ಶನಕ್ಕೆ ಹೋದವರು ಶ್ರೀಧರ್ ಎಂ ಹೊಳಲ್ಕೇರಿ (62), ಶಾಂತಾ ಎಸ್ ಹೊಳಲ್ಕೇರಿ (57), ಅಶೋಕ್ ಎಸ್‌ವಿ (61), ಭಾರತಿ ಎಎಸ್ (55), ವೆಂಕಟೇಶ್ ಪಂಪನ್ (62), ರಾಜೇಶ್ವರಿ ಪಂಪನ್ (60), ರಾಹುಲ್ ಪಂಪನ್ (35) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡೀಸೆಲ್‌ ಟ್ಯಾಂಕ್‌ನಲ್ಲಿಟ್ಟು ಸಾಗಿಸ್ತಿದ್ದ 30 ಕೋಟಿ ಮೌಲ್ಯದ 1,00,000 ಡ್ರಗ್ಸ್‌ ಮಾತ್ರೆ ಜಪ್ತಿ – ಇಬ್ಬರು ಖತರ್ನಾಕ್‌ ಅರೆಸ್ಟ್‌!

ಜೂನ್ 29ರಂದು ಚಾರಧಾಮ್ ಯಾತ್ರೆಗೆ 7 ಮಂದಿ ತೆರಳಿದ್ದರು. ಶುಕ್ರವಾರ ವಿಮಾನ ಬುಕ್ ಆಗಿದ್ದು, ಊರಿಗೆ ವಾಪಾಸ್ ಆಗಬೇಕಿತ್ತು. ಆದರೆ ಭೂ ಕುಸಿತವಾಗಿದ್ದರಿಂದ ಅಲ್ಲಿಯೇ ಉಳಿದುಕೊಂಡಿದ್ದು, ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ನಮ್ಮನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆಸಿಕೊಳ್ಳಲು ಕೆಲಸ ಮಾಡಬೇಕು ಎಂದು ಪ್ರವಾಸಿಗರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಲಿತರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ: ವಿಜಯೇಂದ್ರ

ಜುಲೈ 7ರಂದು ನೇಪಾಳದಲ್ಲಿ ಭಾರೀ ಮಳೆಯಿಂದ ಗುಡ್ಡ ಕುಸಿತವಾಗಿ ಮುಕ್ತಿಧಾಮ ದೇವಾಲಯಕ್ಕೆ ತೆರಳಿದ್ದ 50 ಮಂದಿ ಕನ್ನಡಿಗ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಬಳಿಕ ರಕ್ಷಣಾ ಪಡೆ ಈ ಎಲ್ಲಾ ಕನ್ನಡಿಗರನ್ನು ರಕ್ಷಿಸಿತ್ತು. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ – ಬಿಪಿಎಲ್‌ ಕಾರ್ಡ್‌ದಾರರಿಗೆ ಸೊಳ್ಳೆ ನಿರೋಧಕ, ಬೇವಿನ ಎಣ್ಣೆ ವಿತರಿಸಲು ಸೂಚನೆ!

Share This Article