ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ಆರೋಪಿಯಾಗಿ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಕನ್ನಡದ ಹಲವು ನಟ, ನಟಿಯರು ದರ್ಶನ್ (Darshan) ಪ್ರಕರಣದ ಬಗ್ಗೆ ಮಾತನಾಡಿದ ಬೆನ್ನಲ್ಲೇ ಈಗ ‘ಜಾಲಿಡೇಸ್’ ನಟಿ ಸ್ಪೂರ್ತಿ ವಿಶ್ವಾಸ್ (Spoorthi Vishwas) ಕೂಡ ಮಾತನಾಡಿದ್ದಾರೆ. ತಪ್ಪು ಯಾರೇ ಮಾಡಿದ್ರೂ ಶಿಕ್ಷೆಯಾಗಲಿ ಎಂದು ‘ಪಬ್ಲಿಕ್ ಟಿವಿ’ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ಹೃದಯಾಘಾತದಿಂದ ನಿಧನ
ಇದು ತುಂಬಾ ಸೂಕ್ಷ್ಮ ವಿಚಾರ. ನಾನು ದರ್ಶನ್ ಅಣ್ಣನನ್ನು ಭೇಟಿ ಮಾಡಿದ್ದು ಬುಲ್ ಬುಲ್ ಸಿನಿಮಾ ಟೈಮ್‌ನಲ್ಲಿ, ಆ ಪರಿಚಯವೇ ಇಂದಿಗೂ ಅವರು ನನ್ನ ಸ್ವಂತ ತಂಗಿ ಹಾಗೆ ಟ್ರೀಟ್ ಮಾಡಿದ್ದರು. ಅವರ ಮನೆಗೆ ಬರುತ್ತಿದ್ದೀನಿ ಅಂದರೆ ನನಗೆ ಏನು ಇಷ್ಟ ಅದನ್ನೇ ಅಡುಗೆ ಮಾಡಿಸುತ್ತಿದ್ದರು. ಅವರ ಹಾಗೆಯೇ ವಿಜಯಲಕ್ಷ್ಮಿ ಅಕ್ಕ ಕೂಡ ಮನೆಯವರ ಹಾಗೆಯೇ ನೋಡಿಕೊಳ್ತಿದ್ದರು ಎಂದು ನಟಿ ಸ್ಪೂರ್ತಿ ಮಾತನಾಡಿದ್ದಾರೆ.
ಆದರೆ ಈ ಪ್ರಕರಣ ಬಗ್ಗೆ ಕೇಳಿದ್ಮೇಲೆ ಅದನ್ನು ನಂಬೋಕೆ ಕಷ್ಟವಾಯಿತು. ನನ್ನ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಇಷ್ಟು ಕ್ರೂರತ್ವ ಇರುವ ವ್ಯಕ್ತಿತ್ವ ಅವರದಲ್ಲ. ಆದರೆ ಕಾನೂನು ಎಲ್ಲರಿಗೂ ಒಂದೇ. ಅದರ ಪ್ರಕಾರ ಯಾರೇ ತಪ್ಪಿಸ್ಥರು ಇದ್ದಾರೆ ಅವರಿಗೆ ಶಿಕ್ಷೆಯಾಗಲಿ. ಇದರಿಂದ ದರ್ಶನ್ ಅಣ್ಣ ಆಚೆ ಬರಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನಟಿ ಮಾತನಾಡಿದ್ದಾರೆ.
ದರ್ಶನ್ ಅಣ್ಣನ ಕಷ್ಟದ ಸಮಯದಲ್ಲಿ ವಿಜಯಲಕ್ಷ್ಮಿ ಅಕ್ಕ ಜೊತೆ ನಿಂತಿದ್ದಾರೆ. ಅವರ ಮೇಲೆ ಗೌರವ ಇನ್ನೂ ಜಾಸ್ತಿ ಆಗಿದೆ. ಇದರಿಂದ ಮದುವೆ ಬೆಲೆ ಏನು ಅಂತ ನೀವು ಪ್ರೂವ್ ಮಾಡಿದ್ದೀರಾ ಎಂದು ವಿಜಯಲಕ್ಷ್ಮಿ ಬಗ್ಗೆ ನಟಿ ಮಾತನಾಡಿದ್ದಾರೆ. ದರ್ಶನ್ ಅಣ್ಣ ಈ ಕೆಲಸ ಮಾಡಿಲ್ಲ ಅಂತ ನಂಬಿಕೆಯಿದೆ. ಅವರು ಅರೆಸ್ಟ್ ಆಗಿದ್ದಾರೆ ಅಂತ ಸುದ್ದಿ ಕೇಳಿದಾಗ ಶಾಕ್ ಆಯ್ತು. ಹೀಗೆ ಆಗಬಾರದಿತ್ತು ಅನಿಸಿತು ಎಂದು ಸ್ಪೂರ್ತಿ ಮಾತನಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಕೆಟ್ಟದಾಗಿ, ಹೀನಾಯವಾಗಿ ಮೇಸೇಜ್ ಮಾಡುತ್ತಾರೆ. ತುಂಬಾ ಜನ ಹೆಣ್ಣು ಮಕ್ಕಳು ಈ ವಿಷ್ಯನ ಆಚೆ ಹೇಳಿಕೊಳ್ಳೋಕೆ ಹಿಂಜರಿಯುತ್ತಾರೆ. ಆ ಒಂದು ಮೆಸೇಜ್‌ನಿಂದ ಇವತ್ತು ಎಷ್ಟು ಕುಟುಂಬಗಳು ಬೀದಿಗೆ ಬಂದಿದೆ. ಹೀಗೆಲ್ಲಾ ಮಾಡಲು ಹೋಗಬೇಡಿ ಎಂದಿದ್ದಾರೆ. ದರ್ಶನ್ ಅಣ್ಣ ಕನ್ನಡ ಚಿತ್ರರಂಗಕ್ಕೆ ವಾಪಾಸ್ ಬರಲಿ ಚಿತ್ರಗಳನ್ನು ಮಾಡಲಿ ಎಂದಿದ್ದಾರೆ. ಅಣ್ಣನನ್ನು 3 ವರ್ಷದ ಹಿಂದೆ ಮೀಟ್ ಮಾಡಿದ್ದು, ಅವರ ಮನೆಯಲ್ಲಿ ಊಟ ಮಾಡಿದ್ದೀನಿ. ಆ ಋಣಕ್ಕಾದ್ರೂ ಅವರನ್ನು ಮೀಟ್ ಮಾಡುತ್ತೇವೆ ಎಂದು ನಟಿ ಭಾವುಕರಾಗಿದ್ದಾರೆ.