ಯಾದಗಿರಿ: ನಗರದ (Yadgir) ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದ್ದ ಹಸುಗೂಸಿನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗುವಿನ ಚಿಕ್ಕಪ್ಪ ಪ್ರೀತಿ ನಿರಾಕರಸಿದ್ದಕ್ಕೆ ಆತನ ಮೇಲೆ ಕೊಲೆ ಆರೋಪ ಬರುವಂತೆ ಸಂಚು ರೂಪಿಸಿ ಅಪ್ರಾಪ್ತೆಯೊಬ್ಬಳು ಮಗುವನ್ನು ಬಾವಿಗೆ ಎಸೆದು ಹತ್ಯೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಜು.6 ರಂದು ನಾಗೇಶ್ ಹಾಗೂ ಚಿಟ್ಟೆಮ್ಮ ಎಂಬವರ 2 ತಿಂಗಳ ಹಸುಗೂಸನ್ನು ಬಾವಿಗೆ ಎಸೆದು ಕೊಲೆ ಮಾಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮಗುವನ್ನು ತೆಗೆದುಕೊಂಡು ಹೋಗಿ ಬಾಲಕಿಯೊಬ್ಬಳು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಮಗುವನ್ನು ಹತ್ಯೆ ಮಾಡಿ ಬಳಿಕ ಕಣ್ಣೀರು ಹಾಕಿ ನಾಟಕ ಮಾಡಿದ್ದಳು. ಅಲ್ಲದೇ ಮಗು ನಾಪತ್ತೆಯಾದಾಗ ಹುಡುಕುವ ವೇಳೆ ಬಾವಿ ಕಡೆ ಇರಬಹುದು, ಒಬ್ಬರು ಮಗುವನ್ನು ತೆಗೆದುಕೊಂಡು ಹೋದ್ರು ಎಂದು ಪೋಷಕರಿಗೆ ಬಾಲಕಿ ಹೇಳಿದ್ದಳು. ಇದನ್ನೂ ಓದಿ: ತೀವ್ರ ಹೃದಯಾಘಾತದಿಂದ ವಿರಕ್ತ ಮಠದ ಶ್ರೀಗಳು ವಿಧಿವಶ
ಕೊಲೆಯಾದ ಮಗುವಿನ ಚಿಕ್ಕಪ್ಪ ಯಲ್ಲಪ್ಪನನ್ನು ಅಪ್ರಾಪ್ತೆ ಪ್ರೀತಿಸುತ್ತಿದ್ದಳು. ಅಲ್ಲದೇ 5 ಬಾರಿ ಆತನಿಗೆ ಪ್ರಪೋಸ್ ಮಾಡಿದ್ದಳು. ಆದರೆ ಯಲ್ಲಪ್ಪ, ಸಂಬಂಧದಲ್ಲಿ ಬಾಲಕಿ ತಂಗಿಯಾಗುತ್ತಾಳೆ ಎಂದು ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಬಾಲಕಿ, ಮಗುವನ್ನು ಹತ್ಯೆಗೈದು ಯಲ್ಲಪ್ಪನ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿ, ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಅಲ್ಲದೇ ಕಳೆದ ವರ್ಷ ರಕ್ಷಾಬಂಧನದಲ್ಲಿ ಯಲ್ಲಪ್ಪನಿಗೆ ಬಾಲಕಿ ರಾಖಿ ಸಹ ಕಟ್ಟಿದ್ದಳು ಎಂದು ತಿಳಿದು ಬಂದಿದೆ. ಆದರೂ ಬಾಲಕಿ ಯಲ್ಲಪ್ಪನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದಳು. ಇದೀಗ ಬಾಲಕಿಯ ಹುಚ್ಚು ಪ್ರೀತಿಗೆ ಪುಟ್ಟ ಮಗುವಿನ ಜೀವ ಬಲಿಯಾಗಿದೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 15 ದಿನದ ಮಗಳನ್ನ ಜೀವಂತ ಸಮಾಧಿ ಮಾಡಿದ ತಂದೆ!