ಡೆಂಗ್ಯೂ ಅಬ್ಬರದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ

Public TV
1 Min Read
Rat Bite Fever 2

ಹಾವೇರಿ: ರಾಜ್ಯಾದ್ಯಂತ ಡೆಂಗ್ಯೂ ಜ್ವರ ಬಿಟ್ಟು ಬಿಡದೇ ಜನರನ್ನು ಕಾಡುತ್ತಿದೆ. ಇದರ ನಡುವೆ ಹಾವೇರಿಯಲ್ಲಿ ಇಲಿ ಜ್ವರ  (Rat Bite Fever) ಪತ್ತೆಯಾಗಿದೆ.

ಹಾವೇರಿ (Haveri) ತಾಲ್ಲೂಕಿನ 12 ವರ್ಷದ ಬಾಲಕನಿಗೆ ಇಲಿ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಾಲಕನಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಜ್ವರ ಕಾಣಿಸಿಕೊಂಡ ಹಿನ್ನಲೆ ಹಾವೇರಿ ಜಿಲ್ಲಾಸ್ಪತ್ರಗೆ ದಾಖಲಿಸಲಾಗಿತ್ತು. ಈ ವೇಳೆ ಬಾಲಕನಿಗೆ ಜಾಂಡೀಸ್ ಕಾಣಿಸಿಕೊಂಡಿತ್ತು. ಬಳಿಕ ರೋಗ ಗುಣಮುಖಗೊಂಡ ಹಿನ್ನೆಲೆ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದ. ಮತ್ತೆ ಬಾಲಕನಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬಾಲಕನಿಗೆ ಇಲಿ ಜ್ವರ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಗದಗದಲ್ಲಿ ಡೆಂಗ್ಯೂಗೆ 5 ವರ್ಷದ ಬಾಲಕ ಬಲಿ

ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಕುಸಿತ – ರಸ್ತೆ ಮಧ್ಯೆ ಸಿಲುಕಿದ ಕನ್ನಡಿಗ ಯಾತ್ರಾರ್ಥಿಗಳು

Share This Article