ತ್ರಿವರ್ಣ ಧ್ವಜ ಹಿಡಿದು ‘ವಂದೇ ಮಾತರಂ’ ಹಾಡಿದ ಟೀಂ ಇಂಡಿಯಾ ಆಟಗಾರರು, ಫ್ಯಾನ್ಸ್‌ – ಮೈನವಿರೇಳಿಸುವ ವೀಡಿಯೋ ಹಂಚಿಕೊಂಡ RCB

Public TV
2 Min Read
Virat Kohli

ಮುಂಬೈ: ಟಿ20 ವಿಶ್ವಕಪ್‌ (T20 World Cup 2024) ಗೆದ್ದ ಟೀಂ ಇಂಡಿಯಾ ಆಟಗಾರರನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭವ್ಯ ಸಮಾರಂಭ ಆಯೋಜಿಸಿ ಅಭಿನಂದಿಸಲಾಯಿತು. ಈ ವೇಳೆ ‘ವಂದೇ ಮಾತರಂ’ ಹಾಡನ್ನು ಹಾಡುವ ಮೂಲಕ ಟೀಂ ಇಂಡಿಯಾ (Team India) ಆಟಗಾರರು ಮತ್ತು ಅಭಿಮಾನಿಗಳು ದೇಶಪ್ರೇಮ ಮೆರೆದರು.

ಕ್ರೀಡಾಂಗಣದಲ್ಲಿ ರೋಹಿತ್‌ ಪಡೆ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿತು. ಈ ವೇಳೆ ಅಭಿಮಾನಿಗಳು ಸಹ ಕ್ರಿಕೆಟಿಗರ ಜೊತೆ ಸಂಭ್ರಮಾಚರಿಸಿದರು. ಕ್ರೀಡಾಂಗಣದಲ್ಲಿ ‘ವಂದೇ ಮಾತರಂ’ ಹಾಡು ಕೇಳಿಬಂತು. ಇದಕ್ಕೆ ಆಟಗಾರರು, ಫ್ಯಾನ್ಸ್‌ ಎಲ್ಲರೂ ದನಿಗೂಡಿದರು. ಇದನ್ನೂ ಓದಿ: ಅಂದು ಅವಮಾನ, ಇಂದು ಸನ್ಮಾನ – ಟೀಕಿಸಿದ್ದ ಜನರೇ ಜೈಕಾರ ಕೂಗಿದ್ರು; ಭಾವುಕನಾದ ಪಾಂಡ್ಯ

team india players

ಎಲ್ಲರೂ ಹಾಡನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದರು. ಈ ಸಂದರ್ಭ ನಿಜಕ್ಕೂ ಮೈನವರೇಳಿಸುವಂತಿತ್ತು. ದೃಶ್ಯದ ವೀಡಿಯೋವನ್ನು ಐಪಿಎಲ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ವಿಜಯೋತ್ಸವಕ್ಕೆ ಆಹ್ವಾನಿಸಿದ್ದ ರೋಹಿತ್‌:
ಮುಂಬೈನವರೇ ಆಗಿರುವ ನಾಯಕ ರೋಹಿತ್ ಶರ್ಮಾ ತಮ್ಮ ತವರಿನ ಅಭಿಮಾನಿಗಳಿಗೆ ಈ ಬೃಹತ್ ಮೆರವಣಿಯಲ್ಲಿ ಪಾಲ್ಗೊಳ್ಳುವಂತೆ ವಿಶೇಷವಾಗಿ ಮನವಿ ಮಾಡಿದ್ದರು. ಭಾರತಕ್ಕೆ ಬರುವ ಮುನ್ನವೇ ರೋಹಿತ್​ ‘ಇಂತಹ ವಿಶೇಷ ಸಂಭ್ರಮವನ್ನು ನಿಮ್ಮೊಂದಿಗೆ ಆಚರಿಸುವ ಬಯಕೆಯಿದೆ. ಮರೈನ್ ಡ್ರೈವ್ ಹಾಗೂ ವಾಂಖೇಡೆ ಕ್ರೀಡಾಂಗಣದಲ್ಲಿ ನಮ್ಮೊಂದಿಗೆ ನೀವೂ ಜತೆಯಾಗಿ’ ಎಂದು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ವಾಂಖೆಡೆ ಮೈದಾನಕ್ಕೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಮೈದಾನದ ತುಂಬಾ ಅಭಿಮಾನಿಗಳು ಕಿಕ್ಕಿರಿದಿದ್ದರು. ಇದನ್ನೂ ಓದಿ: Champions: ವಿಶ್ವ ಚಾಂಪಿಯನ್ಸ್‌ಗೆ ಬಂಪರ್‌ ಗಿಫ್ಟ್‌ – 125 ಕೋಟಿ ರೂ. ಬಹುಮಾನ ಚೆಕ್‌ ವಿತರಣೆ

ಮುಂಬೈಗೆ ತೆರಳುವ ಮುನ್ನ ಟೀಮ್​ ಇಂಡಿಯಾ ಆಟಗಾರರು ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿವಾಸಕ್ಕೆ (Team India Arrival) ಭೇಟಿ ನೀಡಿ ವಿಶ್ವಕಪ್​ ಗೆಲುವಿನ ಕುರಿತು ಪ್ರಧಾನಿ ಜತೆ ತಮ್ಮ ಅನುಭವ ಹಂಚಿಕೊಂಡರು. ಮೋದಿ ಕೂಡ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಜೊತೆಗೆ ಗ್ರೂಫ್​ ಫೋಟೊ ತೆಗೆಸಿಕೊಂಡರು. ಆಟಗಾರರಿಗೆ ವಿಶೇಷ ಭೋಜನ ಕೂಟ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಬಿಸಿಸಿಐ ಕಡೆಯಿಂದ ಮೋದಿಗೆ (PM Modi) ನಮೋ ನಂ.1 ಎಂದು ಬರೆದ ಟೀಂ​ ಇಂಡಿಯಾ ಜೆರ್ಸಿಯನ್ನು (Indian Cricket Jersey) ಉಡುಗೊರೆಯಾಗಿ ನೀಡಲಾಯಿತು.

Share This Article