ಬಾರ್ಬಡೋಸ್‌ನಲ್ಲಿನ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಆಟಗಾರರು ಇಂದು ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದ ಟೀಂ, ಮೊದಲು ಪ್ರಧಾನಿಯನ್ನು ಭೇಟಿ ಮಾಡಿದೆ. ಈ ವೇಳೆ ಬಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಲುಕ್ ಎಲ್ಲರ ಗಮನ ಸೆಳೆದಿದೆ.
ಹೌದು. ಜೈಸ್ವಾಲ್ ಅವರು ಹೊಸ ಹೇರ್‌ಸ್ಟೈಲ್‌ನಲ್ಲಿ ಇಂದು ಕಾಣಿಸಿಕೊಂಡಿದ್ದರು. ಹೀಗಾಗಿ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಅವರ ಫೋಟೋ ಇಟ್ಟುಕೊಂಡು ಹಲವು ಮೀಮ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರು ಆಗಮಿಸಿದ ವಿಮಾನಕ್ಕೆ ವಾಟರ್ ಸೆಲ್ಯೂಟ್
Yashasvi Jaiswal ???????? pic.twitter.com/6TMuJj2FTi
— Frenz???? (@FrenzY_hu) July 4, 2024
ʼತಾಯಿ ನಿಮ್ಮ ಕೂದಲನ್ನು ಬಾಚಿದಾಗʼ ಎಂದು ಪುಟ್ಟ ಮಗು ಹಾಗೂ ಜೈಸ್ವಾಲ್ ಫೋಟೋ ಕೊಲಾಜ್ ಮಾಡಿ ಹರಿಬಿಡಲಾಗಿದೆ. ಇನ್ನೂ ಕೆಲವರು ಪೋಷಕರು ಶಿಕ್ಷಕರ ಸಭೆಯಲ್ಲಿ ಭಾಗವಹಿಸಲು ಹೋಗುವಾಗ ಮಕ್ಕಳ ಮುಖದಂತೆ ಜೈಸ್ವಾಲ್ ಮುಖ ಇಲ್ಲಿ ಮುಗ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಹೀಗೆ ಹಲವಾರು ಮೀಮ್ಸ್‌ಗಳು ಬರುತ್ತಿವೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೇತೃತ್ವದ ತಂಡ ಇಂದು ಬೆಳಗ್ಗೆ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi)ಅವರ ನಿವಾಸಕ್ಕೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿಯಿಂದ ಹ್ಯಾಂಡ್‌ಶೇಕ್ ಮತ್ತು ಅಪ್ಪುಗೆಯೊಂದಿಗೆ ಅದ್ಧೂರಿ ಸ್ವಾಗತ ಪಡೆದ ಟೀಂ ಇಂಡಿಯಾ ಆಟಗಾರರು ಮಾತುಕತೆ ನಡೆಸಿದರು. ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಟೀಂ ಫೋಟೋ ಕ್ಲಿಕ್ಕಿಸಿಕೊಂಡರು. ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ವಿಶೇಷ ವಿಮಾನದ ಮೂಲಕ ಮುಂಬೈಗೆ ಟೀಂ ಬಂದಿಳಿಯಿತು. ಏರ್ ಇಂಡಿಯಾದ ವಿಮಾನ ಮುಂಬೈ ತಲುಪುತ್ತಿದ್ದಂತೆ ವಿಶೇಷ ರೀತಿಯಲ್ಲಿ ವಾಟರ್ ಜೆಟ್‌ಗಳ ಮೂಲಕ ಆಟಗಾರರಿಗೆ ಭರ್ಜರಿ ಸ್ವಾಗತ ಕೋರಲಾಗಿಯಿತು. ಈ ನಡುವೆ ವಿಜಯಯಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದು, ‘ಮುಂಬೈನ ನಾರೀಮನ್ ಪಾಯಿಂಟ್‌ನಿಂದ ರೋಡ್ ಶೋ ನಡೆಯಲಿದೆ.