ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಶುರುವಾಗ್ತಿದೆ. ಶೀಘ್ರದಲ್ಲೇ ತೆಲುಗಿನ ಬಿಗ್ ಬಾಸ್ ಸೀಸನ್ 8 (Bigg Boss Telugu 8) ಶುರುವಾಗಲಿದೆ. ಈ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ಸಿಕ್ಕಿದೆ. ಅದಷ್ಟೇ ಅಲ್ಲ, ದೊಡ್ಮನೆ ಆಟಕ್ಕೆ ಬರಲಿರುವ ಸ್ಪರ್ಧಿಗಳು ಕೂಡ ಫೈನಲ್ ಆಗಿದ್ದಾರೆ.
ಕನ್ನಡದ ಬಿಗ್ ಬಾಸ್ ಮತ್ತು ತೆಲುಗಿನ ಬಿಗ್ ಬಾಸ್‌ಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಾರೆ. ಬಿಗ್ ಬಾಸ್‌ಗೆ ದೊಡ್ಡಮಟ್ಟದ ಫ್ಯಾನ್ ಬೇಸ್ ಕೂಡ ಇದೆ. ಅಂದಹಾಗೆ, ಇದೇ ಆಗಸ್ಟ್ 4ರಂದು ತೆಲುಗಿನ ಬಿಗ್ ಬಾಸ್ ಪ್ರಸಾರವಾಗಿದೆ. ಇದನ್ನೂ ಓದಿ:ದುಬೈನಲ್ಲಿ ಚಂದನ್ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಪ್ರೀಮಿಯರ್ ಶೋ
ಇನ್ನೂ ಸ್ಪರ್ಧಿಗಳ ವಿಚಾರಕ್ಕೆ ಬಂದರೆ, ಕುಮಾರಿ ಆಂಟಿ ಎಂಬುವರು ರಸ್ತೆ ಬದಿ ಫುಡ್ ಟ್ರಕ್ ಇಟ್ಟುಕೊಂಡಿದ್ದಾರೆ. ಇವರು ಬಿಗ್ ಬಾಸ್‌ಗೆ ಬರಲಿದ್ದಾರೆ ಎನ್ನಲಾಗಿದೆ. ರೇವ್ ಪಾರ್ಟಿ ಪ್ರಕರಣದ ಆರೋಪಿ ಹೇಮಾ (Hema), ಅಮೃತಾ ಪ್ರಣಯ್, ಯೂಟ್ಯೂಬರ್ ನೇತ್ರಾ ಮತ್ತು ವಂಶಿ ಸೇರಿದಂತೆ ಅನೇಕರ ಹೆಸರುಗಳು ವೈರಲ್ ಆಗಿದೆ. ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.
ಅಂದಹಾಗೆ, ಈ ಸೀಸನ್ ಕೂಡ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರೇ ನಿರೂಪಣೆ ಮಾಡಲಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಬಿಗ್ ಬಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.