ದುಬೈ: ಟಿ20 ವಿಶ್ವಕಪ್ ಕ್ರಿಕೆಟ್ (T20 World Cup) ಮುಗಿದಿದ್ದು ಭಾರತ (Team India) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿ ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್ 2024 ರ ಕನಸಿನ ತಂಡವನ್ನು ಐಸಿಸಿ ಬಿಡುಗಡೆ ಮಾಡಿದೆ.
ಈ ಆಟಗಾರರ ಪಟ್ಟಿಯಲ್ಲಿ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿಗೆ (Virat Kohli) ಸ್ಥಾನ ನೀಡಿಲ್ಲ. ಟೀಂ ಇಂಡಿಯಾದ 6 ಆಟಗಾರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಎರಡು ಮಹತ್ವದ ಜವಾಬ್ದಾರಿ – ಆರ್‌ಸಿಬಿಗೆ ದಿನೇಶ್ ಕಾರ್ತಿಕ್ ರಿಎಂಟ್ರಿ
ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್‌ದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಅಫಘಾನಿಸ್ತಾನದ ರಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫಾರೂಕಿ ಆಸ್ಟ್ರೇಲಿಯಾ ಮಾರ್ಕಸ್ ಸ್ಟೊಯಿನಿಸ್ ಮತ್ತು ವಿಂಡೀಸಿನ ನಿಕೋಲಸ್ ಪೂರನ್ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರನಾಗಿ ಆಫ್ರಿಕಾ ಆನ್ರಿಚ್ ನಾರ್ಟ್ಜೆ ಆಯ್ಕೆಯಾಗಿದ್ದಾರೆ.
ಪ್ರತಿ ಕ್ರಿಕೆಟ್ ಟೂರ್ನಿ ಮುಗಿದ ಬಳಿಕ ಐಸಿಸಿ ಡ್ರೀಮ್ ತಂಡವನ್ನು ಪ್ರಕಟಿಸುತ್ತದೆ. ಟೂರ್ನಿಯುದ್ಧಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪೈಕಿ ಕೇವಲ 12 ಮಂದಿಯನ್ನು ಮಾತ್ರ ಅಂತಿಮವಾಗಿ ಐಸಿಸಿ ಆಯ್ಕೆ ಮಾಡುತ್ತದೆ.