ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ: ಅದ್ವಿತಿ ಶೆಟ್ಟಿ

Public TV
1 Min Read
ADVITHI SHETTY

ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್‌ ಸ್ಟಾರ್‌ ಜೈಲು ಸೇರಿದ್ದಾರೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ‌ ದಂಗುಬಡಿಸಿದೆ. ಸದ್ಯ ನಟ ಆದಷ್ಟು ಬೇಗ ನಿರಪರಾಧಿಯಾಗಿ ಹೊರಬರಲಿ ಎಂಬುದಾಗಿ ನಟ-ನಟಿಯರು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ನಟಿ ಅದ್ವಿತಿ ಶೆಟ್ಟಿ (Adhvithi Shetty) ಕೂಡ ಇಂದು ಪ್ರತಿಕ್ರಿಯಿಸಿದ್ದಾರೆ.

DARSHAN 1

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ನಟಿ, ಈ ಘಟನೆ ಬೇಸರ ತಂದಿದೆ. ಯಾರು ಯಾರಿಗೂ ಕೆಟ್ಟ ಕಾಮೆಂಟ್ ಮಾಡಬೇಡಿ. ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು. ಇದನ್ನೂ ಓದಿ: ದರ್ಶನ್‌ ಸರ್‌ ನಿರಪರಾಧಿಯಾಗಿ ಆಚೆ ಬರಲಿ: ಕಾರುಣ್ಯ ರಾಮ್‌

ದರ್ಶನ್ ಸರ್ ನಮ್ ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಬಂದಿದ್ರು. ಅವತ್ತು ಸಿಕ್ಕಾಗ ಚೆನ್ನಾಗಿ ಮಾತಾಡಿಸಿದ್ರು. ಮತ್ತೆ ಯಾವತ್ತೂ ಮುಖಾಮುಖಿ ಆಗಿಲ್ಲ. ಈ ಕೇಸ್ ನಿಂದ ದರ್ಶನ್ ಸರ್ ಆಚೆ ಬರಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.

ಪ್ರಕರಣ ಏನು?: ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಮಾಡಿದನೆಂದು ಆರೋಪಿಸಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು (Renukaswamy Case) ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ದರ್ಶನ್‌ (Challenging Star Darshan) ಮತ್ತು ಗ್ಯಾಂಗ್‌ನಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಅಲ್ಲದೇ ಮೃತದೇಹವನ್ನು ಸುಮ್ಮನಹಳ್ಳಿ ಮೋರಿಗೆ ಎಸೆಯಲಾಗಿತ್ತು.

PAVITHRA GOWDA RENUKASWAMY

ಇತ್ತ ಕಾಮಾಕ್ಷಿಪಳ್ಯ ಪೊಲೀಸ್‌ ಠಾಣೆಗೆ ನಾಲ್ವರು ಶರಣಾಗಿ ಹಣದ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದರು. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಸಲಿ ವಿಚಾರ ಗೊತ್ತಾಗಿದೆ. ಈ ಕೇಸ್‌ನಲ್ಲಿ ದರ್ಶನ್‌ ಪಾತ್ರ ಇರುವುದನ್ನು ಮನಗಂಡ ಪೊಲೀಸರು ನೇರವಾಗಿ ಮೈಸೂರಿಗೆ ತೆರಳಿ ನಟನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಒಬ್ಬೊಬ್ಬರಾಗಿ ಒಟ್ಟು 17 ಮಂದಿಯನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿತ್ತು. ತನಿಖೆಯ ಭಾಗವಾಗಿ ಸ್ಥಳ ಮಹಜರು ಪೂರ್ಣಗೊಳಿಸಿದ ಬಳಿಕ ಆರೋಪಿಗಳನ್ನು ಕೋರ್ಟ್‌ ಮುಂದೆ ಹಾಜರಿಸಿ ನಂತರ ಜೈಲಿಗಟ್ಟಲಾಗಿದೆ.

Share This Article