ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ – ಮೊದಲ ದಿನವೇ 3 ವಿಶ್ವದಾಖಲೆ ಬರೆದ ಭಾರತ

Public TV
2 Min Read
team india record

ಚೆನ್ನೈ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಮೊದಲ ದಿನವೇ ಟೀಂ ಇಂಡಿಯಾದ (Team India) ಆಟಗಾರ್ತಿಯರು 3 ವಿಶ್ವದಾಖಲೆ (World Record) ಬರೆದಿದ್ದಾರೆ.

ಆರಂಭಿಕ ಆಟಗಾರ್ತಿ 20 ವರ್ಷದ ಶಫಾಲಿ ವರ್ಮಾ (Shafali Verma) ವೇಗದ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದಾರೆ. ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಶಫಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಈ ಮೊದಲು ಆಸ್ಟ್ರೇಲಿಯಾ ಅನ್ನಾಬೆಲ್ ಸದರ್ಲ್ಯಾಂಡ್ ಅವರು 2024ರಲ್ಲೇ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ 200 ರನ್‌ ಹೊಡೆದಿದ್ದರು.

Shafali Verma

ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ (Smriti Mandhana ) ಅವರ ಮೊದಲ ವಿಕೆಟಿಗೆ 312 ಎಸೆತಗಳಲ್ಲಿ 292 ಜೊತೆಯಾಟವಾಡಿ ವಿಶ್ವದಾಖಲೆ ಬರೆದಿದ್ದಾರೆ. ಈ ಹಿಂದೆ 2004ರಲ್ಲಿ ಪಾಕಿಸ್ತಾನದ ಕಿರಣ್‌ ಬಲೂಚ್‌ ಮತ್ತು ಸಜಿದಾ ಅವರು ವಿಂಡೀಸ್‌ ವಿರುದ್ಧ ಮೊದಲ ವಿಕೆಟಿಗೆ 241 ರನ್‌ ಜೊತೆಯಾಟವಾಡಿದ್ದರು. ಇದನ್ನೂ ಓದಿ: ಗೆದ್ದು ಬಾ ಟೀಂ ಇಂಡಿಯಾ – 2014 ರಿಂದ 2023ವರೆಗೆ ಐಸಿಸಿ ಟೂರ್ನಿಯಲ್ಲಿ ಭಾರತ ಸಾಧನೆ ಏನು?

Smriti Mandhana

ಟೀಂ ಇಂಡಿಯಾ ಆಟಗಾರ್ತಿಯರ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದ 98 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 525 ರನ್‌ ಗಳಿಸಿದೆ. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಇತಿಹಾಸಲ್ಲಿ ಮೊದಲ ದಿನ ಅತಿ ಹೆಚ್ಚು ರನ್‌ ಪೇರಿಸಿದ ದಾಖಲೆಯನ್ನು ಭಾರತ ಬರೆದಿದೆ. ಇದನ್ನೂ ಓದಿ: ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

ಸ್ಮೃತಿ ಮಂಧನಾ 149 ರನ್‌ (161 ಎಸೆತ, 27 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರೆ ಶಫಾಲಿ ವರ್ಮಾ 205 ರನ್‌(197 ಎಸೆತ, 23 ಬೌಂಡರಿ, 8 ಸಿಕ್ಸರ್‌) ಹೊಡೆದು ರನೌಟ್‌ಗೆ ಬಲಿಯಾದರು.


ಜೆಮಿಮಾ ಜೆಮಿಮಾ ರಾಡ್ರಿಗಸ್ 55 ರನ್‌ (94 ಎಸೆತ, 8 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದರು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಔಟಾಗದೇ 42 ರನ್(‌76 ಎಸೆತ, 2 ಬೌಂಡರಿ), ರಿಚಾ ಘೋಷ್‌ ಔಟಾಗದೇ 43 ರನ್‌(33 ಎಸೆತ, 9 ಬೌಂಡರಿ) ಹೊಡೆದಿದ್ದಾರೆ.

Share This Article