ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ (Valmiki Corporation Scam) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ 13ನೇ ಆರೋಪಿ ಸತ್ಯನಾರಾಯಣ್ ವರ್ಮಾ ಗಂಭೀರ ಆರೋಪವೊಂದನ್ನು ಮಾಡಿದ್ದಾನೆ.
3ನೇ ಎಸಿಎಂಎಂ ಕೋರ್ಟ್‍ಗೆ ಮನವಿ ಪತ್ರ ಸಲ್ಲಿಕೆ ಮಾಡುವ ಮೂಲಕ ವರ್ಮಾ ಸಿಐಡಿ ಮೇಲೆ ಆರೋಪ ಮಾಡಿದ್ದಾನೆ. ಮೃತ ಚಂದ್ರಶೇಖರ್ ಆರೋಪ ಮಾಡಿದರೂ ನಿಜವಾದ ಆರೋಪಿಗಳನ್ನ ಸಿಐಡಿ ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಸಿಐಡಿ ಅಧಿಕಾರಿಗಳಿಂದಲೂ ನನಗೆ ಜೀವ ಬೆದರಿಕೆ ಇದೆ. ತಾವು ಹೇಳಿದಂತೆ ಕೇಳಲು ಸಿಐಡಿ ಒತ್ತಡ ಹಾಕಿದ್ದಾರೆ ಎಂದು ಕೋರ್ಟ್‍ಗೆ ಸಲ್ಲಿಸಿದ ಮನವಿ ಪತ್ರದಲ್ಲಿ ವರ್ಮಾ ತಿಳಿಸಿದ್ದಾನೆ.
ಅಲ್ಲದೇ ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡ ಪೇಪರ್ ಫೋಟೋ ತೆಗೆಯಲು ಅವಕಾಶ ನೀಡಿಲ್ಲ. ನನ್ನ ಅರೆಸ್ಟ್ ಮಾಡಿದ ನಾಲ್ಕು ದಿನಗಳ ಕಾಲ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ನನಗೆ ಅವಕಾಶ ನೀಡಬೇಕು. ಸಿಐಡಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಹೇಳಿಕೆ ನೀಡಲು ಅವಕಾಶ ಕೊಡಿ. ಇನ್ ಕ್ಯಾಮಾರ ಪ್ರೊಸಿಡಿಂಗ್ಸ್ ನ ಲ್ಲಿ ಹೇಳಿಕೆ ನೀಡಲು ಅವಕಾಶ ನೀಡಿ ಎಂದು ಪೊಲೀಸ್ ಕಸ್ಟಡಿ ಮುಗಿಸಿ ಕೋರ್ಟ್‍ಗೆ ಹಾಜರುಪಡಿಸಿದಾಗ ವಕೀಲರ ಮೂಲಕ ವರ್ಮಾ ಕೋರ್ಟ್‍ಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾನೆ.
ಹೊಸದಾಗಿ 4 ಎಫ್‍ಐಆರ್: ವಾಲ್ಮೀಕಿ ನಿಗಮ ಅಭಿವೃದ್ಧಿ ಹಗರಣ ಪ್ರಕರಣ ಸಂಬಂಧ ಇದೀಗ ಹೊಸದಾಗಿ 4 ಎಫ್ ಐ ಆರ್ ಗಳು ದಾಖಲು ಮಾಡಿಕೊಳ್ಳಲಾಗಿದೆ. ಎಸ್ ಐಟಿಯಿಂದ ಸಿಐಡಿಯಲ್ಲಿ ವಂಚನೆ ಪ್ರಕರಣದ ಅಡಿಯಲ್ಲಿ ನೆಕ್ಕುಂಡಿ ನಾಗರಾಜ್, ಸತ್ಯನಾರಾಯಣ ವರ್ಮ, ನಾಗೇಶ್ವರ ರಾವ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ.