98 ಭಾರತದ ಹಜ್‌ ಯಾತ್ರಿಕರು ಸಾವು – ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ

Public TV
1 Min Read
hajj pilgrimage

ನವದೆಹಲಿ: ಹಜ್‌ (Hajj) ಯಾತ್ರೆಗಾಗಿ ಸೌದಿ ಅರೇಬಿಯಾಗೆ (Saudi Arabia) ತೆರಳಿದ್ದ 98 ಭಾರತೀಯರು (Indians) ಸಾವನ್ನಪ್ಪಿದ್ದಾರೆ. ಎಲ್ಲ ಸಾವುಗಳಿಗೆ ವಯೋ ಸಹಜ ಖಾಯಿಲೆ, ವೃದ್ಧಾಪ್ಯ ಕಾರಣ ಎಂದು ಕೇಂದ್ರ ವಿದೇಶಾಂಗ ಇಲಾಖೆ (MEA) ಹೇಳಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಇಲಾಖೆ, ನೈಸರ್ಗಿಕ ಕಾರಣಗಳಿಂದ ಭಾರತೀಯ ಮೂಲದ ಹಜ್‌ ಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.


ಹಜ್ ಯಾತ್ರೆಯು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಧಾರ್ಮಿಕ ಬಾಧ್ಯತೆಯನ್ನು ಪೂರೈಸಬೇಕು. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್‌ಗಾಗಿ ಸೌದಿಗೆ ಭೇಟಿ ನೀಡಿದ್ದಾರೆ. ಜುಲೈ 9 ರಿಂದ 22 ರವರೆಗೆ ಕೋರ್ ಹಜ್ ಅವಧಿ ಆರಂಭವಾಗಲಿದೆ. ಈ ನಡುವೆ ಇದುವರೆಗೆ 98 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಯುರ್ವೇದ ಮಸಾಜ್‌ಗೆ ಬಂದಾಗ ಬಲವಂತದ ಸೆಕ್ಸ್‌: ದೂರು ಸಲ್ಲಿಸಿದ ವಿದೇಶಿ ಯುವತಿ

ಈ‌ ನಡುವೆ ಗರಿಷ್ಠ ತಾಪಮಾನ ಸುಡುವ ಬಿಸಿಲಿನ ಕಾರಣದಿಂದಾಗಿ 1000 ಕ್ಕೂ ಅಧಿಕ ಹಜ್‌ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಇಡೀ ಯಾತ್ರೆಯಲ್ಲಿ 180ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಸೌದಿಯ ಅಧ್ಯಯನವೊಂದು ಈ ಪವಿತ್ರ ಕ್ಷೇತ್ರದ ತಾಪಮಾನವು ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ ಎಂದು ತಿಳಿಸಿದೆ.

 

Share This Article