ಮೈಸೂರು: ಅರಮನೆ ನಗರಿಯಲ್ಲಿ ಇಬ್ಬರು ಶಾಸಕರ ನಡುವೆ ಜಟಾಪಟಿ ನಡೆದಿರುವುದು ಬಯಲಾಗಿದೆ.
ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ತನ್ವಿರ್ ಸೇಠ್ (Tanveer Sait) ಮತ್ತು ಶಾಸಕ ಜಿ.ಟಿ ದೇವೇಗೌಡ (GT Devegowda) ನಡುವೆ ಕಿತ್ತಾಟ ನಡೆದಿದೆ. ಇದನ್ನೂ ಓದಿ: ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ- ತೀರ್ಪು ಕಾಯ್ದಿರಿಸಿದ ಕೋರ್ಟ್
ಜನಸ್ಪಂದನಾ ಕಾರ್ಯಕ್ರಮದಲ್ಲಿ ಶಾಸಕ ತನ್ವಿರ್ ಸೇಠ್ ಪ್ರಸ್ತಾವಿಕ ಭಾಷಣ ಮಾಡುತ್ತಿದ್ದರು. ಈ ವೇಳೆ ಮೈಕ್ ಕಿತ್ತುಕೊಂಡ ಜಿಟಿಡಿ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದಾರೆ. ನಾವಿಲ್ಲಿ ನಮ್ಮದೇ ಭಾಷಣ ಮಾಡುತ್ತ ಕುಳಿತರೆ ಹೇಗೆ..?. ನಮ್ಮ ಮಾತು ಕೇಳಲಿಕ್ಕೆ ಜನ ಬಂದಿಲ್ಲ. ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲಿಕ್ಕೆ ಬಂದಿದ್ದಾರೆ. ಜನರ ಸಮಸ್ಯೆ ಕೇಳಿ ಎಂದು ಡಿಸಿ ರಾಜೇಂದ್ರಗೆ ಜಿಟಿಡಿ ಗದರಿದ ಪ್ರಸಂಗ ನಡೆದಿದೆ.
ಇಬ್ಬರು ಶಾಸಕರ ನಡುವಿನ ಕಿತ್ತಾಟದಿಂದ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.